ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ಬಗ್ಗೆ ಸರಿಯಾಗಿ ತರಬೇತಿ ಕೊಡಿ ಅಂತ ಸಾರ್ವಜನಿಕರು ಬಿಎಂಟಿಸಿಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ. ಸರಿಯಾಗಿ ರೂಲ್ಸ್ ಫಾಲೋ ಮಾಡದ ಡ್ರೈವರ್‌ಗಳ ವಿರುದ್ಧ ಸಾರ್ವಜನಿಕರು ಸಮರ ಸಾರಿದ್ದು, ದೂರು ನೀಡಿದ್ದಾರೆ.
ಬಿಎಂಟಿಸಿ ಚಾಲಕರಿಂದ ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಕಳುಹಿಸಿ ಬಿಎಂಟಿಸಿ ಹಾಗೂ ಸಾರಿಗೆ ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.
ಹೆಬ್ಬಾಳ ಮತ್ತು ಕೆ.ಆರ್ ಪುರಂ ರಸ್ತೆಯಲ್ಲಿ ಬಿಎಂಟಿಸಿ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಎರಡೂ ಕಡೆ ರ‍್ಯಾಶ್ ಡ್ರೈವಿಂಗ್ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಬಿಎಂಟಿಸಿ ಯಾವುದೇ ಕ್ರಮ ಕೈಗೊಂಡಿಲ್ಲ.