September 27, 2026
Sunday, September 27, 2026
spot_img

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಭೇಟಿ ನೀಡಿದ್ದಾರೆ.

ದೇವಾಲಯದ ವತಿಯಿಂದ ಗೌರವ

ಅಂಬಾನಿ ಕುಟುಂಬದ ಗುರೂಜಿ ಜೊತೆ ಆಗಮಿಸಿದ ಅನಂತ್ ಅಂಬಾನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭ ದೇವಾಲಯದ ವತಿಯಿಂದ ಗೌರವಿಸಲಾಯಿತು.

ಜೂನ್ 13 ರಂದು ನಿಗದಿಯಾಗಿತ್ತು

ಜೂನ್ 13ರಂದು ಅನಂತ್ ಅಂಬಾನಿ ಕೊಲ್ಲೂರು ಮೂಕಾಂಬಿಕೆ ದರುಶನಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಮುಂಬೈನಲ್ಲಿ ಭಾರೀ ಮಳೆ ಕಾರಣದಿಂದ ಪ್ರವಾಸ ಮುಂದೂಡಲಾಗಿತ್ತು. ಇದೀಗ ಇಂದು ಸಂಜೆ ವೇಳೆ ಕೊಲ್ಲೂರು ಮೂಕಾಂಬಿಕೆ ತಲುಪಿದ ಅನಂತ್ ಅಂಬಾನಿ ದೇವಿ ದರುಶನ ಪಡೆದಿದ್ದಾರೆ.

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಕೊಲ್ಲೂರು ಮೂಕಾಂಬಿಕೆ ದರುಶನ ಪಡೆದು ಮರಳಿದ್ದರು.

Must Read