September 29, 2026
Tuesday, September 29, 2026
spot_img

ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕಾ ದೇವಿಯ ದರುಶನ ಪಡೆದ ಕೇರಳ ಸಿಎಂ ವಿ.ಡಿ. ಸತೀಶನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳ ಸಿಎಂ ವಿ.ಡಿ. ಸತೀಶನ್‌ ಅವರು ಇಂದು ಮುಂಜಾನೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ದೇವಿಯ ದರುಶನ ಪಡೆದಿದ್ದಾರೆ.

ಝೆಡ್‌-ಪ್ಲಸ್‌ ಭದ್ರತೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಸಿಎಂ ಸತೀಶನ್‌ ಅವರು ಮುಂಜಾನೆಯೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಗೌರವ ಸಲ್ಲಿಸಲಾಗಿದೆ. ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ಸತೀಶನ್‌ ಅವರು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ಪೂಜೆ ಮುಗಿಸಿದ ನಂತರ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಸತೀಶನ್‌ ಅವರು ಆಗಮಿಸಿದ್ದ ಹಿನ್ನೆಲೆ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Must Read