ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಉದ್ಯಮಿಯೊಬ್ಬರಿಗೆ ಬರೋಬ್ಬರಿ 210 ಕೋಟಿ ರೂ.ಗಳ ವಿದ್ಯುತ್ ಬಿಲ್ ಬಂದಿದೆ.
ಇದು ಹಮೀರ್‌ಪುರದ ಭೋರಂಜ್ ಉಪವಿಭಾಗದ ಬೆಹದ್ವಿನ್ ಜತ್ತನ್ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ಉದ್ಯಮಿ ಲಲಿತಾ ಧಿಮಾನ್ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದಾರೆ.
ಲಲಿತಾ ಅವರಿಗೆ ವಿದ್ಯುತ್ ಇಲಾಖೆ 210 ಕೋಟಿ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಕಳುಹಿಸಿದೆ. ಈ ವೇಳೆ ಮಹಿಳಾ ಉದ್ಯಮಿ 2,10,42,08,405 ರೂಪಾಯಿ ಬಿಲ್ ನೋಡಿದಾಗ ದಿಗ್ಭ್ರಮೆಗೊಂಡಿದ್ದು, ಕೋಟ್ಯಂತರ ರೂಪಾಯಿ ಬಿಲ್ ನೋಡಿ ಲಲಿತ್ ಧಿಮಾನ್ ಗೆ ದೊಡ್ಡ ಶಾಕ್ ಆಗಿದೆ.
ವಿದ್ಯುಚ್ಛಕ್ತಿ ಮಂಡಳಿ ನೌಕರ ಅವರಿಗೆ ಕೋಟ್ಯಂತರ ರೂಪಾಯಿ ಬಿಲ್ ನೀಡಿದ್ದು, ಬಳಿಕ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಬಳಿಕ ಇದೀಗ 4,047 ರೂಪಾಯಿ ಬಿಲ್ ಬಂದಿದೆ.