ಸಂಜೆಯ ಟೀ ಟೈಮ್ ಎಂದರೆ ಗರಿಗರಿಯಾದ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಇಂತಹ ಸಮಯದಲ್ಲಿ ಬೇಕರಿಗಳಲ್ಲಿ ಸಿಗುವ ಜೀರಿಗೆ ಮತ್ತು ಓಮದ ಸುವಾಸನೆ ಹೊಂದಿರುವ ಖಾರಾ ಬಿಸ್ಕತ್‌ಗಳು ಪ್ರತಿಯೊಬ್ಬರ ನೆಚ್ಚಿನ ಸ್ನ್ಯಾಕ್ಸ್ ಆಗಿರುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಬಿಸ್ಕತ್‌ಗಳಿಗಿಂತ ಮನೆಯಲ್ಲೇ ಶುದ್ಧವಾದ ಬೆಣ್ಣೆ ಮತ್ತು ಮಸಾಲೆಗಳನ್ನು ಬಳಸಿ ಮಾಡಿ ಈ ಖಾರಾ ಬಿಸ್ಕತ್.
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು
ಕಡಲೆಹಿಟ್ಟು
ಬೆಣ್ಣೆ
ಸಕ್ಕರೆ ಪುಡಿ
ಹಸಿಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್:
ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು
ಜೀರಿಗೆ
ಅಜ್ವೈನ್
ಬೇಕಿಂಗ್ ಪೌಡರ್
ಉಪ್ಪು
ಹಾಲು
ಮಾಡುವ ವಿಧಾನ
ಮೊದಲಿ ಒಂದು ದಪ್ಪ ತಳದ ಕಡಾಯಿ ಅಥವಾ ಕುಕ್ಕರ್‌ನ ತಳಕ್ಕೆ 1 ಕಪ್ ಉಪ್ಪು ಅಥವಾ ಮರಳನ್ನು ಹಾಕಿ ಹರಡಬೇಕು ಅದರ ಮೇಲೆ ಒಂದು ಸಣ್ಣ ಸ್ಟ್ಯಾಂಡ್ ಇಟ್ಟು, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 10 ನಿಮಿಷ ಕಾಯಲು ಇಡಬೇಕು. ಬಳಿಕ ಒಂದು ಬೌಲ್‌ನಲ್ಲಿ ಬೆಣ್ಣೆ ಮತ್ತು ಸಕ್ಕರೆ ಪುಡಿಯನ್ನು ಹಾಕಿ ಚಮಚದಿಂದ ಚೆನ್ನಾಗಿ ಕಲಸಿ, ಅದು ಮೃದು ಹಾಗೂ ಬಿಳಿ ಕೆನೆಯಂತಾಗುವವರೆಗೆ ಮಿಕ್ಸ್ ಮಾಡಬೇಕು. ನಂತರ ಅದಕ್ಕೆ ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್, ಜೀರಿಗೆ, ಓಮ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಲಘುವಾಗಿ ಕೈಯಾಡಿಸಿ. ನಂತರ ಒಂದು ಜರಡಿಯ ಸಹಾಯದಿಂದ ಮೈದಾ ಹಿಟ್ಟು, ಕಡಲೆಹಿಟ್ಟು, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಬೆಣ್ಣೆಯ ಮಿಶ್ರಣಕ್ಕೆ ಜರಡಿ ಹಿಡಿದು ಹಾಕಬೇಕು.
ಎಲ್ಲವನ್ನೂ ಒಟ್ಟಿಗೆ ಸೇರಿಸಿ ಚಪಾತಿ ಹಿಟ್ಟಿನಂತೆ ಲಘುವಾಗಿ ಕಲಸಿಕೊಂಡು. ಬಳಿಕ ಹಿಟ್ಟನ್ನು ಒಂದು ಚಪಾತಿ ಮಣೆ ಅಥವಾ ಬಟರ್ ಪೇಪರ್ ಮೇಲೆ ಇಟ್ಟು, ಅರ್ಧ ಇಂಚು ದಪ್ಪವಿರುವಂತೆ ದಪ್ಪ ಚಪಾತಿಯ ಆಕಾರದಲ್ಲಿ ಲಟ್ಟಿಸಿಕೊಳ್ಳಬೇಕು. ನಂತರ ನಿಮಗಿಷ್ಟವಾದ ಆಕಾರದಲ್ಲಿ ಕುಕ್ಕಿ ಕಟ್ಟರ್ ಅಥವಾ ಸಣ್ಣ ಲೋಟದ ಸಹಾಯದಿಂದ ಬಿಸ್ಕತ್‌ಗಳನ್ನು ಕತ್ತರಿಸಿ. ಒಂದು ಸ್ಟೀಲ್ ತಟ್ಟೆಗೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಸವರಿ, ಅದರ ಮೇಲೆ ಸ್ವಲ್ಪ ಮೈದಾ ಹಿಟ್ಟು ಉದುರಿಸಿ, ಕತ್ತರಿಸಿದ ಬಿಸ್ಕತ್‌ಗಳನ್ನು ಸ್ವಲ್ಪ ಜಾಗ ಬಿಟ್ಟು ಜೋಡಿಸಿ. ನಂತರ ಈ ತಟ್ಟೆಯನ್ನು ಪ್ರಿ-ಹೀಟ್ ಮಾಡಿದ ಕಡಾಯಿಯ ಒಳಗಿರುವ ಸ್ಟ್ಯಾಂಡ್ ಮೇಲೆ ಜಾಗ್ರತೆಯಾಗಿ ಇಟ್ಟು, ಕಡಾಯಿಯ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಯಿಸಿದರೆ ಬೇಕರಿ ಶೈಲಿಯ ಮಸಾಲ ಖಾರಾ ಬಿಸ್ಕತ್ ಸಿದ್ಧವಾಗುತ್ತದೆ.



