September 28, 2026
Monday, September 28, 2026
spot_img

Food | ಬಾಯಲ್ಲಿ ನೀರೂರಿಸುವ ಕಾರ್ನ್ ಕಬಾಬ್.. ರೆಸಿಪಿ ಮಾತ್ರ ಸಿಂಪಲ್ & ಸೂಪರ್ ಟೇಸ್ಟಿ

ಬೇಕಾಗುವ ಸಾಮಗ್ರಿಗಳು :

ಬೇಯಿಸಿದ ಸ್ವೀಟ್ ಕಾರ್ನ್

ಬೇಯಿಸಿದ ಆಲೂಗಡ್ಡೆ

ಈರುಳ್ಳಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಖಾರದ ಪುಡಿ

ಗರಂ ಮಸಾಲ

ನಿಂಬೆರಸ

ಅಕ್ಕಿ ಹಿಟ್ಟು

ಕಾರ್ನ್‌ಫ್ಲೋರ್

ಉಪ್ಪು

ಎಣ್ಣೆ

ಮಾಡುವ ವಿಧಾನ :

ಬೇಯಿಸಿದ ಸ್ವೀಟ್ ಕಾರ್ನ್ ಅನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಬೌಲ್‌ನಲ್ಲಿ ರುಬ್ಬಿದ ಕಾರ್ನ್, ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲ, ನಿಂಬೆರಸ , ಉಪ್ಪು, ಅಕ್ಕಿ ಹಿಟ್ಟು ಮತ್ತು ಕಾರ್ನ್‌ಫ್ಲೋರ್ ಹಾಕಿ ಚೆನ್ನಾಗಿ ನಾದಿ ಕಲಸಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಲಸಿದ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ತಟ್ಟಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಧ್ಯಮ ಉರಿಯಲ್ಲಿ ತಟ್ಟಿದ ಕಬಾಬ್‌ಗಳನ್ನು ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಗರಿಗರಿಯಾಗಿ ಕರೆದು ತೆಗೆಯಿರಿ. ಈಗ ಬಿಸಿಬಿಸಿಯಾದ, ರುಚಿಕರವಾದ ಸ್ವೀಟ್ ಕಾರ್ನ್ ಕಬಾಬ್ ಸಿದ್ಧ! ಇದನ್ನು ಟೊಮೆಟೊ ಸಾಸ್ ಅಥವಾ ಪುದೀನಾ ಚಟ್ನಿ ಜೊತೆ ಸವಿಯಲು ನೀಡಿ.

Must Read