TASTY CAKE| ನಿಮ್ಮ ಮಕ್ಕಳಿಗೆ ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ಮಾಡಿ ಕೊಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ.

ಕೇಕ್‌ಗೆ ಬೇಕಾಗುವ ಸಾಮಗ್ರಿ:

2 ಕಪ್ ಅಕ್ಕಿ ಹಿಟ್ಟು

2-3 ಕಪ್ ಹಾಲು ಅಥವಾ ಗಟ್ಟಿ ಮೊಸರು

1 ಕಪ್ ಬೆಣ್ಣೆ

8-10 ಮೊಟ್ಟೆ

1 ಚಮಚ ಅಡುಗೆ ಸೋಡಾ

2 ಕಪ್ ಸಕ್ಕರೆ

2 ಚಮಚ ವೆನಿಲ್ಲಾ ಎಸೆನ್ಸ್

ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿ

ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ತಯಾರಿಸುವ ವಿಧಾನ :

ಮೊದಲು ಓವೆನನ್ನು 350 F ನಷ್ಟು ಬಿಸಿ ಮಾಡಬೇಕು. ಬೆಣ್ಣೆ ಮತ್ತು ಸಕ್ಕರೆಯನ್ನು ಬೆರೆಸಿ ಮೃದುವಾಗುವವರೆಗೂ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ಈಗ ಮೊಟ್ಟೆ ಬೆರೆಸಿ ಚೆನ್ನಾಗಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಬೇಕು.

ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನಾದಬೇಕು. ಬಾದಾಮಿ, ಗೋಡಂಬಿ, ವೆನಿಲ್ಲಾ ಎಸೆನ್ಸ್ ಹಾಕಿ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಅದನ್ನು 40-50 ನಿಮಿಷ ಓವನ್ ನಲ್ಲಿಡಬೇಕು.

ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ತಿನ್ನಲು ರೆಡಿ…!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!