April 9, 2026
Thursday, April 9, 2026
spot_img

ಅಬ್ರಾರ್ ಖರೀದಿ ಭಾರತೀಯ ಸೈನಿಕರ ಸಾವಿಗೆ ಕಾರಣವಾಗ್ಬಹುದು: ಹೀಗ್ಯಾಕಂದ್ರು ಸುನಿಲ್ ಗವಾಸ್ಕರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್‌ನಲ್ಲಿ ಸನ್​ರೈಸರ್ಸ್​ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ಹಿನ್ನೆಲೆ ವಿವಾದ ತೀವ್ರಗೊಂಡಿದೆ. ಸನ್ ಗ್ರೂಪ್ ಒಡೆತನದ ಈ ಫ್ರಾಂಚೈಸಿಯ ನಿರ್ಧಾರಕ್ಕೆ ಭಾರತೀಯ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಪಾಕಿಸ್ತಾನಿ ಆಟಗಾರರಿಗೆ ನೀಡುವ ಹಣದ ಮೇಲೆ ಸರ್ಕಾರ ತೆರಿಗೆ ವಿಧಿಸುವುದರಿಂದ, ಅದು ಪರೋಕ್ಷವಾಗಿ ಭಾರತೀಯರ ವಿರುದ್ಧ ಬಳಸಬಹುದು ಎಂದು ಕಠಿಣವಾಗಿ ಟೀಕಿಸಿದ್ದಾರೆ. ಗೆಲುವಿಗಿಂತ ದೇಶದ ಹಿತವೇ ಮುಖ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಇದಕ್ಕೆ ಪ್ರತಿಯಾಗಿ ತಂಡದ ಕೋಚ್ ಡೇನಿಯಲ್ ವೆಟ್ಟೋರಿ, ಇದು ಕೇವಲ ಕ್ರೀಡಾ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ವಿದೇಶಿ ಲೀಗ್ ಆಗಿರುವುದರಿಂದ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಂಡದ ವಿರುದ್ಧ ಅಭಿಯಾನ ಆರಂಭಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !