ಆನ್ ಲೈನ್ ನಿಂದ ಆ್ಯಸಿಡ್ ಖರೀದಿ: ಫ್ಲಿಪ್​​ಕಾರ್ಟ್​​​, ಅಮೆಜಾನ್​​ಗೆ ನೋಟಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿಯಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ ದೇಶದಲ್ಲಿ ಆತಂಕ ಮೂಡಿಸಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಇವರಿಂದ ಅನೇಕ ಮಾಹಿತಿಗಳು ಹೊರಬರುತ್ತಿದೆ.

ಆರೋಪಿಗಳು ಫ್ಲಿಪ್​​ಕಾರ್ಟ್ ನಲ್ಲಿ ಆರ್ಡರ್ ಮಾಡಿ ಆ್ಯಸಿಡ್ ಖರೀದಿಸಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಆ್ಯಸಿಡ್ ಸುಲಭವಾಗಿ ದಕ್ಕುವಂತೆ ಮಾಡುವ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಶಾಪಿಂಗ್ ಸೈಟ್ ಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ.

ನೈಋತ್ಯ ದೆಹಲಿಯ ದ್ವಾರಾಕಾದಲ್ಲಿ ಬುಧವಾರ ವಿದ್ಯಾರ್ಥಿನಿ ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. 20ರ ಹರೆಯದ ಸಚಿನ್ ಅರೋರಾ ಎಂಬ ಯುವಕ ಆ್ಯಸಿಡ್ ದಾಳಿಗೆ ಸಂಚು ರೂಪಿಸಿದ್ದು, ಇವನಿಗೆ ಹರ್ಷಿತ್ ಅಗರವಾಲ್ (19) ಮತ್ತು ವಿರೇಂದರ್ ಸಿಂಗ್ (22) ಸಹಾಯ ಮಾಡಿದ್ದರು. ದಾಳಿ ನಡೆದ 12 ಗಂಟೆಗಳಲ್ಲಿ ಮೂವರನ್ನೂ ಬಂಧಿಸಲಾಗಿದೆ.

ಈ ಆರೋಪಿಗಳಿ ಆನ್​​ಲೈನ್​​ನಲ್ಲಿ ಆ್ಯಸಿಡ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಫ್ಲಿಪ್ ಕಾರ್ಟ್ ಮೂಲಕ ಆ್ಯಸಿಡ್ ಖರೀದಿಸಿದ್ದ ಸಚಿನ್ ಆರೋರಾ ತನ್ನ ಇ ವಾಲೆಟ್ ನಿಂದಲೇ ಹಣ ಪಾವತಿ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತ್ ಹೂಡಾ ಹೇಳಿದ್ದಾರೆ.

ಈಗಾಗಲೇ ದೇಶದಲ್ಲಿ ಸುಪ್ರೀಂಕೋರ್ಟ್ ಆ್ಯಸಿಡ್ ಮಾರಾಟ ನಿಷೇಧ ಮಾಡಿದ್ದರೂ ಆನ್​​ಲೈನ್ ಮೂಲಕ ಆ್ಯಸಿಡ್ ಸುಲಭವಾಗಿ ಖರೀದಿಸಲು ಸಾಧ್ಯ ಎಂಬ ವಿಷಯ ಈ ಪ್ರಕರಣ ಮೂಲಕ ಬೆಳಕಿಗೆ ಬಂದಿದೆ.
ಆ್ಯಸಿಡ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ 2013 ರಲ್ಲಿ ಸುಪ್ರೀಂಕೋರ್ಟ್ ಕೌಂಟರ್‌ನಲ್ಲಿ ಆಸಿಡ್ ಮಾರಾಟವನ್ನು ನಿಷೇಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!