ವಿವಿಧ ರಾಜ್ಯಗಳ ಏಳು ಕ್ಷೇತ್ರದ ಉಪ ಚುನಾವಣೆ: ಇಂಡಿಯಾ ಮೈತ್ರಿ 4, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿವಿಧ ರಾಜ್ಯಗಳ ಏಳು ಕ್ಷೇತ್ರದ ಉಪ ಚುನಾವಣೆಯಲ್ಲಿ (Bypolls 2023) ಇಂಡಿಯಾ ಮೈತ್ರಿ ಕೂಟ(India Bloc) 4 ಕ್ಷೇತ್ರಗಳನ್ನು ಗೆದ್ದರೆ, ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿದೆ.

ತ್ರಿಪುರಾದ (Tripura) ಧನ್ಪುರ್ ಮತ್ತು ಬಾಕ್ಸಾನಗರ್ ಹಾಗೂ ಉತ್ತರಾಖಂಡದ (Uttarakhand) ಬಾಗೇಶ್ವರ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಪಶ್ಚಿಮ ಬಂಗಾಳದ (West Bengal) ಧುಪ್ಗುರಿಯಲ್ಲಿ ಟಿಎಂಸಿ, ಉತ್ತರ ಪ್ರದೇಶದ (Uttar Pradesh) ಘೋಸಿಯಲ್ಲಿ ಸಮಾಜವಾದಿ ಪಾರ್ಟಿ, ಕೇರಳದ (Keral) ಪುತ್ತುಪ್ಪಲ್ಲಿಯಲ್ಲಿ ಕಾಂಗ್ರೆಸ್ (Congress) ಮತ್ತು ಜಾರ್ಖಂಡ್‌ನ ದುಮ್ರಿಯಲ್ಲಿ ಜೆಎಂಎಂ (JMM) ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿಯ ತಫಜ್ಜಲ್ ಹೊಸೈನ್ ಅವರು ಬೊಕ್ಸಾನಗರ ಕ್ಷೇತ್ರವನ್ನು ಗೆದ್ದುಕೊಂಡರೆ, ಬುಡಕಟ್ಟು ಪ್ರಾಬಲ್ಯವಿರುವ ಧನಪುರದಲ್ಲಿ ಬಿಂದು ದೇಬನಾಥ್ ಜಯಶಾಲಿಯಾಗಿದ್ದಾರೆ. ಉತ್ತರಾಖಂಡದ ಬಾಗೇಸ್‌ವರ್‌ನಲ್ಲಿ, ಬಿಜೆಪಿಯ ಪಾರ್ವತಿ ದಾಸ್‌ಗಿಂತ ಆರಂಭಿಕ ಮುನ್ನಡೆ ಸಾಧಿಸಿದ ನಂತರ, ಕಾಂಗ್ರೆಸ್ ಪಕ್ಷದ ಬಸಂತ್ ಕುಮಾರ್ ಹಿಂದೆ ಬಿದ್ದರು. ಅಂತಿಮವಾಗಿ ದಾಸ್ ಅವರು 2,400 ಮತಗಳಿಂದ ಕುಮಾರ್ ಅವರನ್ನು ಸೋಲಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!