September 23, 2026
Wednesday, September 23, 2026
spot_img

ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೆರಡು ವಿಕೆಟ್‌ ಬೀಳುವುದು ಖಚಿತ: ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ರಾಯಚೂರು:

ರಾಜ್ಯ ಸರ್ಕಾರದ ವಿರುದ್ಧ ‘ರಣಕಹಳೆ’ ಯೂದಿದ್ದು, ಈ ಹೋರಾಟ ನಿರ್ಣಾಯಕ ಹಂತ ತಲುಪುವವರೆಗೆ ವಿಶ್ರಮಿಸುವುದಿಲ್ಲ. ಈಗಾಗಲೇ ಸರ್ಕಾರದ ಒಂದು ‘ವಿಕೆಟ್’ ಬಿದ್ದಿದೆ. ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ಗಳು ಬೀಳುವುದು ಖಚಿತ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕರ್ನಾಟಕ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ವೈಪಲ್ಯ ಮತ್ತು‌ ರೈತ ವಿರೋಧಿ ಧೋರಣೆಯ ವಿರುದ್ಧ ಏರ್ಪಡಿಸಿದ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನೆಯ  ಸಭೆಯಲ್ಲಿ  ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ:

ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಒಮ್ಮೆ ಬೀದಿಗಿಳಿದು ಹೋರಾಟಕ್ಕೆ ನಿಂತರೆ, ಆ ಹೋರಾಟವನ್ನು ಪೂರ್ಣಗೊಳಿಸಿ, ತಮ್ಮ ಗುರಿ ಮುಟ್ಟಿದ ಮೇಲೆಯೇ ಮನೆಗೆ ಹಿಂತಿರುಗುವ ನಾಯಕತ್ವ ಅವರದ್ದು. ಅವರ ಆಶೀರ್ವಾದ ಹಾಗೂ ನೇತೃತ್ವದಲ್ಲಿ ನಾವು ರಣರಂಗಕ್ಕೆ ಧುಮುಕಿದ್ದು, ವಿಜಯಶಾಲಿಯಾಗಿ ಹೊರಬರಲಿದ್ದೇವೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !