ಬೈ.. ಬೈ.. ಜಗನ್‌.. ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌; ಮೂರು ದಿನದಲ್ಲಿ 33 ಸಾವಿರ ರೀಟ್ವೀಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
#ByeByeYSJagan ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಆಂದ್ರಪ್ರದೇಶ ಸಿಎಂ ವೈಎಸ್ ಜಗನ್ ಅವರನ್ನು ಟಿಡಿಪಿ ಹಾಗೂ ಜನಸೇನೆ ಪಕ್ಷಗಳು ಟಾರ್ಗೆಟ್ ಮಾಡಿವೆ. ಆಂಧ್ರ ಸಿಎಂ ವಿರುದ್ಧ ಆ ಪಕ್ಷಗಳ ಟ್ವೀಟ್‌ ಗಳು ಇದೀಗ ಟ್ವಿಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ರಾಜ್ಯದಲ್ಲಿ ಸರ್ಕಾರ ಜಾರಿಗೊಳಿಸುತ್ತಿರುವ ಅನಿರ್ಬಂಧಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ ವಿರುದ್ಧ ಈ ಪಕ್ಷಗಳು ಕಿಡಿಕಾರಿವೆ. ಜಗನ್‌ ಅಣ್ಣ ನೀಡಿರುವ ಸ್ಕೀಮ್‌ಗಳಿಂದ ಬೇಸತ್ತಿರುವ ಜನರು 2024ರಲ್ಲಿ ಜಗನ್‌ ಪಕ್ಷಕ್ಕೆ ಟಾಟಾ ಬೈ ಬೈ ಹೇಳುತ್ತಾರೆ ಎಂದು ಟ್ವಿಟರ್‌ ನಲ್ಲಿ ವಿಮರ್ಷಿಸಲಾಗಿದೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನ, ಮದ್ಯಪಾನ ನಿಷೇಧ, ಉದ್ಯೋಗ ಯೋಜನೆಗಳು ಮೊದಲಾದ ವಿಚಾರಗಳ ಕುರಿತಾಗಿ ಜಗನ್‌ ನೀತಿಗಳ ವಿರುದ್ಧ ವಿಪಕ್ಷಗಳು ವ್ಯಂಗ್ಯವಾಡಿವೆ.

 

ಈ ಬಗೆಗಿನ ಹ್ಯಾಶ್‌ಟ್ಯಾಗ್ (#ByeByeYSJagan) ಗುರುವಾರದಿಂದ ಟ್ರೆಂಡಿಂಗ್ ಆಗಿದೆ. ಇದುವರೆಗೆ 33 ಸಾವಿರ ಮಂದಿ ಈ ಟ್ವೀಟ್ ಅನ್ನು ರೀಟ್ವೀಟ್‌ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಈ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್ ಆಗಿರುವುದು ಗಮನಾರ್ಹ. ಇದಕ್ಕೆ ವೈಎಸ್ ಜಗನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗೆ ಈ ರೀತಿಯ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುವುದು ತಪ್ಪು ಎಂದು ಎಂದು ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.
2019 ರ ಚುನಾವಣೆಯಲ್ಲಿ YCP, Bye Bye Babu ಎಂಬ ಘೋಷಣೆಯನ್ನು ಜಗನ್‌ ಬಳಸಿದ್ದರು. ಚುನಾವಣಾ ಪ್ರಚಾರದ ವೇಳೆ ಸಿಎಂ ಜಗನ್ ಸಹೋದರಿ ವೈಎಸ್ ಶರ್ಮಿಳಾ ಅವರು ಚಂದ್ರಬಾಬು ಅವರನ್ನು ಟಾರ್ಗೆಟ್ ಮಾಡಿ `ಬೈ ಬೈ ಬಾಬು’ ಎಂದು ಘೋಷಣೆ ಕೂಗುತ್ತಿದ್ದರು.  ಟ್ಯಾಗ್ ಆಗ ಟ್ರೆಂಡ್ ಆಗಿತ್ತು. ಇದೀಗ ಮೂರು ವರ್ಷಗಳ ನಂತರ ಟ್ವಿಟರ್‌ನಲ್ಲಿ ಈ ಸ್ಲೋಗನ್ #ByeByeYSJagan ಎಂಬ ಬದಲಾವಣೆಯ ರೂಪ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!