ಹೊಸದಿಗಂತ ವರದಿ ಕಲಬುರಗಿ:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್.ಐ.ಎ ತಂಡ ಕಲಬುರಗಿಗೆ ಆಗಮಿಸಿದ್ದು,ಕಲಬುರಗಿಯ ರೈಲು ನಿಲ್ದಾಣದಲ್ಲಿ ಪೋಲಿಸರು ತಪಾಸಣೆ ನಡೆಸುತ್ತಿದ್ದಾರೆ.
ಕಲಬುರಗಿ ರೈಲ್ವೆ ನಿಲ್ದಾಣದ ಸಿಸಿಟಿವಿಗಳನ್ನು ಎನ್ ಐಎ ಪರಿಶೀಲನೆ ಮಾಡುತ್ತಿದ್ದು, ಬಳ್ಳಾರಿಯಿಂದ ನೇರವಾಗಿ ಬಸ್ ಮೂಲಕ ಕಲಬುರಗಿ ಗೆ ಆಗಮಿಸಿದ್ದು, ಸ್ಥಳೀಯ ಪೋಲಿಸರ ಜೊತೆಗೂಡಿ ನಗರದಲ್ಲಿ ಬೆಳಿಗ್ಗೆಯಿಂದ ರೈಲು ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಇನ್ನೂ ಬಳ್ಳಾರಿಯಿಂದ ಬಸ್ ನಲ್ಲಿ ಹುಬ್ಬಳ್ಳಿ ಗೆ ಆಗಮಿಸಿರುವ ಬಾಂಬರ್, ಹುಬ್ಬಳ್ಳಿಯಿಂದ ರೈಲಿನ ಮೂಲಕ ಕಲಬುರಗಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಎನ್ ಐ ಎ ತಂಡದವರು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಬಿರುಸಿನ ತಪಾಸಣೆ ನಡೆಸುತ್ತಿದ್ದಾರೆ.
ರೈಲ್ವೆ ನಿಲ್ದಾಣದ ಆರ್.ಪಿ.ಎಫ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು,ಎನ್.ಐ.ಎ.ನ ಮತ್ತೋಂದು ತಂಡ ಹಳೆ ಜೇವರ್ಗಿ ರಸ್ತೆಯಲ್ಲಿ ಪರಿಶೀಲನೆ ಕಾರ್ಯ ನಡೆಸಿದ್ದು,ಹಳೆ ಜೇವರ್ಗಿ ರಸ್ತೆಯಲ್ಲಿನ ಲಾಡ್ಜ್ ಗಳನ್ನು ತೀವ್ರವಾಗಿ ಪರಿಶೀಲನೆ ನಡೆಸುತ್ತಿದೆ.