ಕರಾವಳಿಯ ಕೃಷಿಕನಿಗೆ ಶಾಕ್ ನೀಡಿದ ಬ್ರಿಟನ್ ಕಂಪನಿ: ಶ್ರೀಲಂಕಾದಿಂದ ಬರೋಬ್ಬರಿ 5 ಲಕ್ಷ ಟನ್ ಅಡಿಕೆ ಆಮದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದಿಂದ ಬರೋಬ್ಬರಿ ಐದು ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಬ್ರಿಟನ್ ಮೂಲದ ಕಂಪನಿಯೊಂದು ಮುಂದಾಗಿದ್ದು, ಈ ಬೆಳವಣಿಗೆ ಕರಾವಳಿಯ ಅಡಿಕೆ ಬೆಳೆಗಾರರಿಗೆ ಭರ್ಜರಿ ಶಾಕ್ ನೀಡಿದೆ.

ಬ್ರಿಟನ್ ಮೂಲದ ಕಂಪನಿ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ಹಾಗೂ ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಈ ಬಗ್ಗೆ ಒಪ್ಪಂದ ನಡೆದಿದ್ದು, ಐದು ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿರುವುದಾಗಿ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ತಿಳಿಸಿದೆ.

ಅಡಿಕೆ ಬೆಳೆಯುವ ಕರಾವಳಿ, ಮಲೆನಾಡಿನ ಭಾಗಗಳಲ್ಲಿ ಈಗಷ್ಟೇ ಅಡಿಕೆ ಕೊಯ್ಲು ಮುಗಿಯುತ್ತಾ ಬಂದಿದ್ದು, ಅಡಿಕೆ ಮಾರಾಟಕ್ಕೆ ಸಿದ್ಧವಾಗುತ್ತಿದ್ದಂತೆಯೇ ಬಂದಿರುವ ಈ ಸುದ್ದಿ ಬೆಳೆಗಾರನನ್ನು ಹೈರಾಣಾಗಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!