ಕಣ್ಣು ಮುಚ್ಚಿ ಕಣ್ಣು ಬಿಡುತ್ತಿದ್ದಂತೆಯೇ ಮನೆಯಲ್ಲಿ ಹೊಸ ಕ್ಯಾಲೆಂಡರ್ ತಂದಾಗಿದೆ. ಪ್ರತಿ ಬಾರಿ 2024 ಎಂದು ಟೈಪ್ ಮಾಡುತ್ತಿದ್ದವರಿಗೆ 2025 ಎಂದು ಬರೆಯೋದು ಸ್ವಲ್ಪ ಕಷ್ಟವಾಗಿದೆ. ಒಂದು ವರ್ಷದಲ್ಲಿ ಏನೆಲ್ಲಾ ಆಯ್ತಲ್ವಾ? ಕಷ್ಟದ ನಿರ್ಧಾರಗಳನ್ನು ತೆಗೆದುಕೊಂಡು ಕಣ್ಣೀರಿಟ್ಟಿದ್ದೀರಿ, ಅದೇ ನಿರ್ಧಾರಗಳಿಂದ ಎಷ್ಟೋ ಜನರ ಬದುಕು ಬಂಗಾರ ಆಗಿದೆ. ಇನ್ನು ಬದುಕಿನ ಮಹತ್ವದ ನಿರ್ಧಾರಗಳು ತೆಗೆದುಕೊಂಡಿರಬಹುದು. ಓದು, ಪರೀಕ್ಷೆ, ಮದುವೆ, ಎಂಗೇಜ್‌ಮೆಂಟ್, ಮಗು ಬದುಕಿಗೆ ಎಂಟ್ರಿ ಕೊಟ್ಟಿರಬಹುದು. ಎಷ್ಟೋ ಮಂದಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರಬಹುದು. ಬಟ್ ಜೀವನ ಸಾಗ್ತಾ ಇದೆ, ಎಷ್ಟೋ ಮಂದಿಗೆ ನಾಳೆ ಅನ್ನೋದೇ ಸಿಗೋದಿಲ್ಲ. ಇರುವ ದಿನವನ್ನು ಎಂಜಾಯ್ ಮಾಡಿ.. ಇಂದು ಹೊಸ ವರ್ಷದ ಮೊದಲ ದಿನ. ಏನೂ ಪ್ಲಾನ್ ಇಲ್ಲ ಅಂದ್ರೆ ಹೇಗೆ? ಈ ರೀತಿ ಖುಷಿಯಾಗಿ ದಿನವನ್ನು ಎಂಜಾಯ್ ಮಾಡಿ..
ಎಷ್ಟೋ ಮಂದಿ ಇದನ್ನು ಹೊಸ ವರ್ಷ ಎಂದು ನಂಬೋದಿಲ್ಲ. ಯುಗಾದಿಯಿಂದ ಹೊಸ ವರ್ಷ ಆರಂಭ ಎಂದು ನಂಬುತ್ತಾರೆ. ಅಂತವರು ಇಂದು ಎಂದಿನಂತೆ ಕ್ಯಾಲೆಂಡರ್ ಬದಲಾವಣೆ ಮಾಡಿ, ಮಾಮೂಲಿ ದಿನ ಶುರು ಮಾಡಬಹುದು.
ನ್ಯೂ ಇಯರ್ ಮೇಲೆ ನಂಬಿಕೆ ಇರುವವರು ಇಂದು ಏನಾದ್ರೂ ಪ್ಲಾನ್ ಮಾಡಿ. ಸ್ನೇಹಿತರನ್ನು ಮೀಟ್ ಮಾಡಿ ಪಾರ್ಟಿ ಮಾಡಿ. ಇಲ್ಲ ಸಿನಿಮಾ ನೋಡಿಬನ್ನಿ.
ನ್ಯೂ ಇಯರ್ ನಂಬುತ್ತೇವೆ ಬಟ್ ಸೆಲೆಬ್ರೇಷನ್ ಮೂಡ್ ಇಲ್ಲ ಎನ್ನುವವರು ಇಂದು ರಜೆ ಹಾಕಿ ಮನೆಯಲ್ಲೇ ಫ್ಯಾಮಿಲಿ ಜೊತೆ ಉತ್ತಮ ಸಮಯ ಕಳೆಯಿರಿ. ಮನೆಯವರೆಲ್ಲ ಸೇರಿ ಅಡುಗೆ ಮಾಡಿ ತಿನ್ನಿ. ಇಲ್ಲ ಸೈಲೆಂಟ್ ಆಗಿ ನಿಮ್ಮ ರೂಮ್‌ನಲ್ಲೇ ನಿಮ್ಮಿಷ್ಟದ ರೀತಿ ದಿನ ಕಳೆಯಿರಿ.
ಮೊದಲೇ ಪ್ಲಾನ್ ಇಲ್ಲ ಎಂದರೂ ಪರವಾಗಿಲ್ಲ. ಇಂದು ಪ್ಲಾನ್ ಮಾಡಿ ಸ್ನೇಹಿತರು ಅಥವಾ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡಿ. ದೂರ ಆಗೋದಿಲ್ಲ ಎಂದರೂ ಹತ್ತಿರದ ದೇವಸ್ಥಾನಕ್ಕಾದರೂ ಹೋಗಿ ಬನ್ನಿ.
ಕೆಲಸವೇ ದೇವರು ಎಂದು ನಂಬುವವರು ಸೀದ ಎಂದಿನಂತೆ ಕೆಲಸಕ್ಕೆ ಹೋಗಿ. ಅಲ್ಲಿ ಏನಾದ್ರೂ ಸ್ಪೆಷಲ್ ಇದ್ದೇ