ಪರಸ್ಪರ ‘ಏ ಭೂತಾ…, ಪಿಶಾಚಿ… ಎಂದು ಕರೆಯುವುದು ‘ಕಿರುಕುಳ’ ಅಲ್ಲ: ಪಾಟ್ನಾ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಗಾತಿಯನ್ನು ‘ಭೂತ’ ‘ಪಿಶಾಚಿ’ ಅಂತ ಕರೆದರೆ ಅದು ಕಿರುಕುಳಕ್ಕೆ ಸಮವಲ್ಲ ಎಂದು ಪಾಟ್ನಾ ಹೈಕೋರ್ಟ್ ಅಭಿಪ್ರಾಯಿಸಿದೆ.
ಈ ಶಬ್ಧಗಳನ್ನು ಬಳಸಿದ ಕುರಿತು ಮಹಿಳೆಯೊಬ್ಬರು ತಮ್ಮ ವಿಚ್ಛೇದಿತ ಪತಿ ಹಾಗೂ ಅವರ ತಂದೆಯ ವಿರುದ್ಧ ಸಲ್ಲಿಸಿದ್ದ ದೂರು ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವರದಕ್ಷಿಣೆ ರೂಪದಲ್ಲಿ ಕಾರು ನೀಡದ್ದಕ್ಕೆ ದೈಹಿಕ ಹಿಂಸೆ ನೀಡಿ, ಕೆಟ್ಟದಾಗಿ ಮಾತನಾಡಿದ್ದರು ಎಂದು ಮಹಿಳೆ ೧೯೯೪ರಲ್ಲಿ ದೂರು ದಾಖಲಿಸಿದ್ದರು.ವಿಚಾರಣೆಯ ವೇಳೆ ಬಿಹಾರದ ನಳಂದಾ ಜಿಲ್ಲಾ ನ್ಯಾಯಾಲಯವು ೨೦೦೮ರಲ್ಲಿ ತಂದೆ ಹಾಗೂ ಮಗನನ್ನು ತಪ್ಪಿತಸ್ಥ ಎಂದು ಹೇಳಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹಾಗೂ ಅವರ ತಂದೆ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಆರಂಭಿಸಿದ ಏಕ ಸದಸ್ಯ ಪೀಠದ ಮುಂದೆ ಮಹಿಳೆ ಪರ ವಕೀಲರು, ೨೧ನೇ ಶತಮಾನದಲ್ಲಿ ಮಹಿಳೆಯನ್ನು ಭೂತ, ಪಿಶಾಚಿ ಎಂದು ಜರಿದಿರುವುದು ಕ್ರೌರ್ಯಕ್ಕೆ ಸಮ ಎಂದು ವಾದಿಸಿದ್ದರು.

ಈ ವಾದವನ್ನು ತಿರಸ್ಕರಿಸಿದ ಪೀಠ, ವೈವಾಹಿಕ ಸಂಬಂಧ ಸರಿ ಇಲ್ಲದ ಸಂದರ್ಭದಲ್ಲಿ ಪತಿ, ಪತ್ನಿ ಇಂಥ ಬೈಗುಳಗಳ ಭಾಷೆ ಬಳಸಿರುವ ಉದಾಹರಣೆಗಳು ಇವೆ. ಆದರೆ ಇಂಥ ಬೈಗುಳಗಳು ಹಾಗೂ ಕೀಳು ಭಾಷೆಗಳು ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ. ಜೊತೆಗೆ ಆರೋಪಿತರಿಂದ ಮಹಿಳೆಗೆ ದೌರ್ಜನ್ಯ, ಕ್ರೂರ ಹಿಂಸೆ ನಡೆದಿದೆ ಎಂಬುದಕ್ಕೆ ಅರ್ಜಿಯಲ್ಲಿ ನಿರ್ದಿಷ್ಟ ಆರೋಪ ಮಾಡಿಲ್ಲ ಎಂದಿರುವ ನ್ಯಾಯ ಪೀಠ, ಕೆಳ ಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!