ಮೇಘನಾ ಶೆಟ್ಟಿ, ಶಿವಮೊಗ್ಗ
ಕತ್ತೆ ಹಾಗೂ ಅದರ ಮಾಲೀಕ ಹೀಗೆ ಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಾ ಇದ್ರು. ದಾರಿ ತಪ್ಪಿ ಮಿನಿ ಕಾಡಿನೊಳಗೆ ಎಂಟ್ರಿ ಕೊಟ್ಬಿಟ್ರು.
ಕಾಡನ್ನ ನೋಡಿ ಕತ್ತೆಗೂ, ಅದರ ಮಾಲೀಕನಿಗೂ ಖುಷಿ ಆಯ್ತು. ಹಸಿರು ಮರಗಳನ್ನ, ಹಣ್ಣು ಹಂಪಲುಗಳನ್ನು ನೋಡ್ತಾ ನಡೀತಿದ್ರು.
ಕತ್ತೆ ಖುಷಿಲಿ ಒಂದ್ ಹೆಜ್ಜೆ ಸ್ಪೀಡ್ ನಡೀತಿತ್ತು. ಆಕಡೆ ಈ ಕಡೆ ನೋಡ್ತಾ ಹೊಂಡಕ್ ಬಿದ್ಬಿಡ್ತು. ಪಾಪ ಕತ್ತೆಗೆ ಹಾರ್ಟ್ ಅಟ್ಯಾಕ್ ಆಗೋದಷ್ಟೇ ಬಾಕಿ. ಹೊಂಡ ತುಂಬ ಆಳ ಇರ್ಲಿಲ್ಲ. ಹಾಗಂತ ಈಸಿಯಾಗಿ ಹೊರಗ್ ಬರಕ್ಕೂ ಆಗ್ತಿರ್ಲಿಲ್ಲ.
ಎಷ್ಟು ದಿನ ಇಲ್ಲಿ ಬದ್ಕಿರೋಕೆ ಸಾಧ್ಯ? ಮುಗೀತು ಇವತ್ಗೆ ಈ ಭೂಮಿ ಮೇಲಿನ ಋಣ ಅಂತ ಕತ್ತೆ ಹಾಗೂ ಅದರ ಮಾಲೀಕ ಡಿಸೈಡ್ ಮಾಡಿದ್ರು.
ಹೀಗೇ ಕತ್ತೆನ ಬಿಟ್ಟು ಹೋಗೋದು ತಪ್ಪಾಗತ್ತೆ ಅಂದ್ಕೊಂಡು ಮಾಲೀಕ ಹಿಡಿ ಹಿಡಿ ಮಣ್ಣನ್ನು ಕತ್ತೆ ಮೇಲೆ ಹಾಕ್ದ. ಕತ್ತೆ ಮಣ್ಣನ್ನ ಕೊಡವ್ತು. ಮಣ್ಣೆ ಕೆಳಗೆ ಬಿತ್ತು. ಅದರ ಮೇಲೆ ಕತ್ತೆ ನಿತ್ಕೋತು. ಹೀಗೆ ಮಾಡ್ತಾ ಮಾಡ್ತಾ, ಸಂಜೆ ಅಷ್ಟೊತ್ಗೆ ಕತ್ತೆ ಮೇಲೆ ಬಂದಿತ್ತು. ಹೊಂಡದ ತುಂಬಾ ಮಣ್ಣು ತುಂಬಿತ್ತು. ಮತ್ತದೇ ಮರ,ಗಿಡ, ಹಸಿರು ಕತ್ತೆಗೆ ಕಾಣಿಸ್ತು.
ಏನರ್ಥ ಆಯ್ತು ನಿಮಗೆ? ಈ ಕತ್ತೆ ನೀವೇ, ಹೌದು, ಜೀವನದಲ್ಲಿ ಬೇಕಾದಷ್ಟು ಬಾರಿ ಗುಂಡಿಗೆ ಬೀಳ್ತೀರಿ, ಯಾರೋ ನಿಮ್ಮ ಮೇಲೆ ಸಮಸ್ಯೆ ಅನ್ನೋ ಮಣ್ಣನ್ನು ಹಾಕಿ ಮುಚ್ಚೋಕೆ ಟ್ರೈ ಮಾಡ್ತಾರೆ. ಆದ್ರೆ ನೀವು ಅದನ್ನು ಕೊಡವಿ, ಅದರ ಮೇಲೆ ಮೆಟ್ಟಿ ನಿಲ್ಬೇಕು. ಆಗ ಸಮಸ್ಯೆಯಿಂದ ಹೊರಗೆ ಬರ‍್ತೀರಿ. ಒಂದು ದಿನ ಸಮಸ್ಯೆ ಎಲ್ಲ ಕಳೆದು ಮತ್ತದೇ ಹೊಸ ಜೀವನ ಕಣ್ಣಿಗೆ ಕಾಣಿಸುತ್ತದೆ.
ಕತ್ತೆ ಏನಾದ್ರು ಮಾಲೀಕ ಹೇಳಿದ್ದಕ್ಕೆ ಒಕೆ ಮಾಡಿ ಕಣ್ಮುಚ್ಚಿ ಮಲ್ಕೊಂಡುಬಿಟ್ಟಿದ್ರೆ, ಕತ್ತೆ ಜೀವನ ಅಲ್ಲಿಗೇ ಮುಗಿದುಹೋಗ್ತಿತ್ತು. ಜೀವನ ಪಾಸಿಟಿವ್ ಆಗಿಯೇ ಇರೋದಿಲ್ಲ. ನೀವು ಕತ್ತೆ ರೀತಿ ಆಗಿ, ಎಲ್ಲವನ್ನು ಕೊಡವಿ ಮೇಲೆ ಬನ್ನಿ.