ಕೋವಿಶೀಲ್ಡ್‌ ಪಡೆದವರು ಐಸ್‌ಕ್ರೀಂ, ಕೂಲ್‌ ಡ್ರಿಂಕ್ಸ್‌ ಕುಡಿಬಾರ್ದಾ? ವೈರಲ್‌ ನ್ಯೂಸ್‌ ನಿಜಾಂಶ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊರೋನಾದಿಂದ ಬಚಾವ್‌ ಆಗೋದಕ್ಕೆ ಕಾದು ಕುಳಿತು ಕೋವಿಶೀಲ್ಡ್‌ ವ್ಯಾಕ್ಸಿನ್‌ ಪಡೆದಿದ್ದ ಜನರಿಗೆ ನಡುಕ ಶುರುವಾಗಿದೆ. ವ್ಯಾಕ್ಸಿನ್‌ನಿಂದ ಕೆಲವು ಅಡ್ಡ ಪರಿಣಾಮಗಳಿವೆ ಎಂದು ಕಂಪನಿ ಹೇಳಿದ ನಂತರದಿಂದ ವ್ಯಾಕ್ಸಿನ್‌ ಪಡೆದವರು ಫ್ರಿಡ್ಜ್‌ ನೀರು ಕುಡಿಬಾರದು, ಕೂಲ್‌ ಡ್ರಿಂಕ್ಸ್‌ ಹಾಗೂ ಐಸ್‌ಕ್ರೀಂ ತಿನ್ನಬಾರದು ಎಂದು ಹೇಳುವ ಸುತ್ತೋಲೆಗಳು ಹರಿದಾಡುತ್ತಿವೆ.

ಜನರ ಇದರಿಂದಾಗಿ ಭಯಬಿದ್ದಿದ್ದು, ತಣ್ಣಗಿನ ಪದಾರ್ಥಗಳ ಬಳಿ ಸುಳಿಯುತ್ತಿಲ್ಲ. ಆದರೆ ಈ ಸುದ್ದಿ ನಿಜ ಅಲ್ಲ. ಸುದ್ದಿ ಸುಳ್ಳಾಗಿದ್ದು, ಇಂತಹ ಯಾವುದೇ ಸುತ್ತೋಲೆ ಇಲಾಖೆ ಹೊರಡಿಸಿಲ್ಲ. ಗಾಬರಿ ಗೊಳ್ಳದಿರಿ, ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ರೀತಿ ಸೂಚನೆ ನೀಡಿರುವ ಕಾಲೇಜುಗಳಿಗೆ ಕಾರಣ ಕೇಳಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತಯ ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್​​ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಢೀರ್​ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಂದು ಖಾಸಗಿ ಕಾಲೇಜು ಸುತ್ತೋಲೆ ಹೊರಡಿಸಿತ್ತು.

ಖಾಸಗಿ ಕಾಲೇಜೊಂದು ಈ ರೀತಿಯಾಗಿ ನೋಟಿಸ್​ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹರದಾಡಲು ಆರಂಭಿಸಿತು. ಇದರಿಂದ ಎಚ್ಚತ್ತ ಆರೋಗ್ಯ ಇಲಾಖೆ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!