ಕಾರಣ ಇರುವವರು ಅಪರಾಧ ಮಾಡಬಹುದೇ?: ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲಪ್ರದೇಶದ ಮಂಡಿಯ ನೂತನ ಸಂಸದೆ ಕಂಗನಾ ರಣಾವತ್​ ಮತ್ತೆ ಗುಡುಗಿದ್ದಾರೆ. ತಮ್ಮ ಮೇಲಿನ ದಾಳಿಯನ್ನು ಅತ್ಯಾಚಾರ, ಕೊಲೆ ಪ್ರಕರಣಗಳ ಜೊತೆ ಹೋಲಿಕೆ ಮಾಡಿಕೊಂಡು ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರತಿ ರೇಪಿಸ್ಟ್‌, ಕೊಲೆಗಡುಕ ಅಥವಾ ಕಳ್ಳನಿಗೆ ತನ್ನದೇ ಆದ ಕಾರಣಗಳಿರುತ್ತವೆ. ಒಂದೋ ಆತನಿಗೆ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಹಣಕಾಸಿಗೆ ಸಂಬಂಧಿಸಿದ ಕಾರಣಗಳಿರುತ್ತವೆ. ಹಾಗಾಗಿಯೇ ಆತ ಕೃತ್ಯ ಎಸಗುತ್ತಾನೆ. ಕಾರಣ ಇಲ್ಲದೇ ಯಾವ ಅಪರಾಧವೂ ನಡೆಯಲ್ಲ. ಆದರೂ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೈಲಿಗಟ್ಟಲಾಗುತ್ತದೆ. ಹೀಗಿರುವಾಗಿ ನನ್ನ ಮೇಲೆ ಹಲ್ಲೆ ನಡೆಸಿದ CIFC ಸಿಬ್ಬಂದಿ ಕುಲ್ವಿಂದರ್‌ ಕೌರ್‌ಗೂ ಒಂದು ಭಾವನಾತ್ಮಕ ಕಾರಣ ಇತ್ತು ಎಂಬ ಕಾರಣ ಹಲವರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾದರೆ ನಿಮ್ಮ ಪ್ರಕಾರ ಕಾರಣ ಇರುವವರು ಅಪರಾಧ ಮಾಡಬಹುದೇ? ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೇ ಆತನ ಮೈ ಮುಟ್ಟಬಹುದೇ? ಕೊಲೆ, ಅತ್ಯಾಚಾರ ಮಾಡಿದರೆ ಸರಿನಾ ಎಂದು ಪ್ರಶ್ನಿಸಿದ್ದಾರೆ.

https://x.com/KanganaTeam/status/1799317324853584160?ref_src=twsrc%5Etfw%7Ctwcamp%5Etweetembed%7Ctwterm%5E1799317324853584160%7Ctwgr%5Ec665f1c668003ddd76f400a0f620812d599da259%7Ctwcon%5Es1_&ref_url=https%3A%2F%2Fvistaranews.com%2Fnational%2Fkangana-ranaut-kangana-ranaut-assault-actor-likens-slap-to-rape-backers-okay-with-rape-or-murder-too%2F670145.html

ನನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದೆ. ದಯವಿಟ್ಟು ಆಕೆಯನ್ನು ಯಾವುದಾದರೂ ಯೋಗ ಅಥವಾ ಧ್ಯಾನ ಕೇಂದ್ರಗಳಿಗೆ ಕಳುಹಿಸಿ. ಇಲ್ಲದಿದ್ದರೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಮನಸ್ಸಿನಲ್ಲಿ ಹೆಚ್ಚು ಹಠ, ಕೋಪ , ಅಸೂಯೆ ಇಟ್ಟುಕೊಳ್ಳಬೇಡಿ. ಆರಾಮಾಗಿರಿ ಎಂದು ಕಂಗನಾ ಮನವಿ ಮಾಡಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಗುರುವಾರ ಕಂಗನಾ ಮೇಲೆ CISF ಸಿಬ್ಬಂದಿ ಕೌರ್‌ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ನಿಟ್ಟಿನಲ್ಲಿ ಆಕೆಯನ್ನು ಅರೆಸ್ಟ್‌ ಮಾಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!