ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಪ್ರಜ್ಞಾನಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಇಂದು ನಡೆದ 10ನೇ ಹಾಗೂ ಅಂತಿಮ ಸುತ್ತಿನ ಪಂದ್ಯದ ಬಳಿಕ ಅಗ್ರಸ್ಥಾನ ಉಳಿಸಿಕೊಂಡ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್(17.5 ಪಾಯಿಂಟ್ಸ್) ಚಾಂಪಿಯನ್ ಪಟ್ಟ ಅಲಂಕರಿಸಿದರು. ಹಿಕಾರು ನಕಮುರಾ- (15.5 ಪಾಯಿಂಟ್ಸ್) ದ್ವಿತೀಯ ಸ್ಥಾನ ಪಡೆದರು. ಪ್ರಜ್ಞಾನಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದ ಸೋದರಿ ವೈಶಾಲಿ 4ನೇ ಸ್ಥಾನ ಪಡೆದರೆ, ಕೊನೆರು ಹಂಪಿ 5ನೇ ಸ್ಥಾನ ಪಡೆದರು. ಚೀನಾದ ಗ್ರ್ಯಾಂಡ್ ಮಾಸ್ಟರ್ ಜು ವೆಂಜುನ್ ಮೊದಲ ಸ್ಥಾನ ಪಡೆದರು.
7ನೇ ಸುತ್ತಿನಲ್ಲಿ ಪ್ರಜ್ಞಾನಂದ ವಿಶ್ವ ಚಾಂಪಿಯನ್, ಚೀನದ ಡಿಂಗ್ ಲಿರೆನ್ ವಿರುದ್ಧ, ಹಾಗೂ 10ನೇ ಸುತ್ತಿನಲ್ಲಿ ಜಪಾನ್ ನ ಹಿಕಾರು ನಕಮುರ ವಿರುದ್ಧ ಜಯ ಸಾಧಿಸಿದರೂ ಅಂಕ ಗಳಿಕೆಯಲ್ಲಿ ಮೇಲೇರಲು ಸಾಧ್ಯವಾಗದೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ಟೂರ್ನಿಯಲ್ಲಿ ಪ್ರಜ್ಞಾನಂದ, ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen)ಗೆ ಸೋಲುಣಿಸಿದ್ದರು.