March 11, 2026
Wednesday, March 11, 2026
spot_img

ನಮ್ಮ ಮೆಟ್ರೋದಲ್ಲಿ ಮದ್ಯ ತೆಗೆದುಕೊಂಡು ಹೋಗಬಹುದಾ? ಶೀಘ್ರದಲ್ಲೇ ಸಿಗಲಿದ್ಯಾ ಪರ್ಮಿಷನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಮಂದಿ ಮೆಟ್ರೋ ಬಳಸಿ ಪ್ರಯಾಣ ಮಾಡ್ತಾರೆ. ಮೆಟ್ರೋ ಸ್ಟೇಷನ್‌ಗಳ ಒಳಗೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎನ್ನುವ ಕಾರಣಕ್ಕೆ ಕೆಲವೊಂದು ವಸ್ತುಗಳಿಗೆ ನಿರ್ಬಂಧ ಹೇರಲಾಗಿದೆ. ಚಾಕು, ಚೂರಿ, ಮದ್ಯ, ಗ್ಯಾಸ್‌ ಇನ್ನಿತರ ಸಾಮಾಗ್ರಿಗಳು ಮೆಟ್ರೋದಲ್ಲಿ ಅಲೋ ಇಲ್ಲ. ಆದರೆ ಇದೀಗ ಸೀಲ್‌ ಆಗಿರುವ ಮದ್ಯವನ್ನು ತೆಗೆದುಕೊಂಡು ಹೋಗಲು ನಮ್ಮ ಮೆಟ್ರೋ ಅನುಮತಿ ನೀಡುತ್ತದೆ ಎನ್ನಲಾಗಿದೆ.

ಸೀಲ್‌ ಆಗಿರುವ ಬಾಟಲಿಗೆ ಮಾತ್ರವೇ ಶೀಘ್ರ ಅವಕಾಶ ನೀಡುವ ಸಾಧ್ಯತೆ ಇದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲೂ ಮತ್ತೆ ಪ್ರಸ್ತಾಪಿಸಲಾಗಿದೆ. ತಾತ್ವಿಕವಾಗಿ ಅನುಮೋದನೆ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್‌ ಮಾರ್ಗದಲ್ಲಿ ಮಾತ್ರ ಮುಚ್ಚುಳ ತೆಗೆಯದ ಬಾಟಲಿ ತೆಗೆದುಕೊಂಡು ಹೋಗಲು ಅನುಮತಿ ಇದೆ.

ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ವಿಶೇಷ ಪರವಾನಗಿ ಅಥವಾ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ. ಅನುಮೋದನೆಯಾದ ಬಳಿಕ ಈ ನಿಯಮವನ್ನು ಮೆಟ್ರೋ ನಿಯಮಾವಳಿಗಳಲ್ಲಿ ಸೇರಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !