July 1, 2026
Wednesday, July 1, 2026
spot_img

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ‘ನೋ ಎಂಟ್ರಿ’: ಅಯೋಗ್ಯ ಸರ್ಕಾರದ ನಿರ್ಧಾರ ಎಂದು ಗರಂ ಆದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹಾಕಿರೋದನ್ನು ನಾವು ಖಂಡಿಸುತ್ತೇವೆ, ಇದೊಂದು ನಾಲಾಯಕ್‌, ಅಯೋಗ್ಯ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗರಂ ಆಗಿದ್ದಾರೆ.

ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಕಾಯ್ದೆ ತಂದ್ರು. ಇದೆಲ್ಲವನ್ನ ಗಮನಿಸಿದ್ರೆ ಕಾಂಗ್ರೆಸ್ ಸರ್ಕಾರದ್ದು ಪ್ರಜಾಪ್ರಭುತ್ವ ಅಣಕಿಸುವ ನಡೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಹಾಕಿಕೊಂಡು ಜನ ಓಡಾಡ್ತಿದ್ದಾರೆ. ಇಂಥದ್ದನ್ನು ನಿಲ್ಲಿಸೋದು ಬಿಟ್ಟು, ನಿಷ್ಪಕ್ಷವಾಗಿ ವರದಿ ಮಾಡೋ ಮಾಧ್ಯಮದವರನ್ನು ಬ್ಯಾನ್‌ ಮಾಡಿದ್ದಾರೆ. ಸುಮ್ಮನೆ ಏನೇನೋ ನೆಪದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುತ್ತಿದೆ ಇದನ್ನು ನಾವು ಒಪ್ಪೋದಿಲ್ಲ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !