ಬೇಸಿಗೆ ಬಿಸಿ, ಸೆಕೆಗೆ ತಣ್ಣೀರು ಬೇಕೇ ಬೇಕು. ಹೆಚ್ಚು ಮಂದಿ ಬಾಯಾರಿಕೆ ನೀಗಿಸಿಕೊಳ್ಳೋಕೆ ಕಿಂಚಿತ್ತೂ ಯೋಚಿಸದೇ ಫ್ರಿಡ್ಜ್‌ನಿಂದ ನೀರು ತೆಗೆದು ಗಟಗಟ ಕುಡಿದುಬಿಡುತ್ತಾರೆ. ಆದರೆ ಇದರಿಂದ ತೊಂದರೆ ಇದೆಯಾ? ಕೆಲವರಂತೂ ಬೇಸಿಗೆ ಅಂತಲ್ಲ, ಎಲ್ಲಾ ಕಾಲದಲ್ಲೂ ಫ್ರಿಡ್ಜ್‌ನೀರನ್ನೇ ರೂಢಿ ಮಾಡಿಕೊಂಡಿರುತ್ತಾರೆ. ಇದರಿಂದ ಏನು ಸಮಸ್ಯೆ ನೋಡಿ..
ಜೀರ್ಣಾಂಗ ವ್ಯವಸ್ಥೆಯನ್ನು ತಣ್ಣೀರು ಹಾಳು ಮಾಡುತ್ತದೆ. ಯಾವಾಗಲೂ ಫ್ರಿಡ್ಜ್ ನೀರನ್ನೇ ಕುಡಿಯುತ್ತಿದ್ದರೆ ಜೀರ್ಣಕ್ರಿಯೆ ಸಮಸ್ಯೆ ಎದುರಾಗುತ್ತದೆ. ಹೊಟ್ಟೆನೋವು, ವಾಣರಿ, ಹೊಟ್ಟೆ ಉಬ್ಬರ ಎದುರಾಗುತ್ತದೆ.
ಬ್ರೇನ್ ಫ್ರೀಜ್ ಸಮಸ್ಯೆ ಎದುರಾಗುತ್ತದೆ. ಕೆಲವರಿಗೆ ಐಸ್ ಕ್ರೀಂನಿಂದಲೂ ಈ ಸಮಸ್ಯೆ ಬರುತ್ತದೆ. ತಲೆನೋವು, ಸೈನಸ್ ಸಮಸ್ಯೆಗೂ ಇದೇ ಕಾರಣ.
ಕುತ್ತಿಗೆಯಿಂದ ಹೃದಯ, ಲಂಗ್ಸ್ ಹಾಗೂ ಡೈಜೆಸ್ಟೀವ್ ಸಿಸ್ಟಮ್‌ನ್ನು ಕನೆಕ್ಟ್ ಮಾಡುವ ನರವೊಂದಕ್ಕೆ ಫ್ರಿಡ್ಜ್ ನೀರಿನಿಂದ ತೊಂದರೆಯಾಗುತ್ತದೆ. ಇದರಿಂದಾಗಿ ಹಾರ್ಟ್ ರೇಟ್ ಕಡಿಮೆಯಾಗುತ್ತದೆ.
ಫ್ರಿಡ್ಜ್ ನೀರು ನಿಮ್ಮ ದೇಹದಲ್ಲಿ ಈಗಾಗಲೇ ಸ್ಟೋರ್ ಆಗಿರುವ ಫ್ಯಾಟ್‌ನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಇದರಿಂದಾಗಿ ತೂಕ ಇಳಿಕೆ ಕಡಿಮೆಯಾಗುತ್ತದೆ. ತೂಕ ಇಳಿಸುವವರು ಕೋಲ್ಡ್ ವಾಟರ್‌ನಿಂದ ದೂರ ಇರಿ.
ವರ್ಕೌಟ್ ನಂತರ ಯಾವ ಕಾರಣಕ್ಕೂ ತಣ್ಣೀರು ಕುಡಿಯಬೇಡಿ. ದೇಹ ತೂಕ ಇಳಿಕೆಗೆ ಸಾಕಷ್ಟು ಹೀಟ್ ಜೆನೆರೇಟ್ ಮಾಡಿರುತ್ತದೆ. ನೀವು ತಣ್ಣೀರು ಕುಡಿದರೆ ಮಿಸ್‌ಮ್ಯಾಚ್ ಆಗಿ ಜೀರ್ಣಕ್ರಿಯೆ ಸಮಸ್ಯೆಯಾಗುತ್ತದೆ.