ಆಂಧ್ರದ ಸ್ಪೆಷಲ್ ಚಿಲ್ಲಿ ಚಿಕನ್ ಯಾರಿಗಿಷ್ಟ ಇಲ್ಲ ಹೇಳಿ? ಅದರಲ್ಲಿಯೂ ಚಿಕನ್ ಜೊತೆಗೆ ಒಂದೊಳ್ಳೆ ಬಿರಿಯಾನಿ ಇದ್ದರೆ ಆ ದಿನ ಸಾರ್ಥಕವಾದಂತೆ. ಅಥೆಂಟಿಕ್ ಚಿಲ್ಲಿ ಚಿಕನ್ ತಿನ್ನೋದಕ್ಕಾಗಿ ದುಬಾರಿ ರೆಸ್ಟೋರೆಂಟ್‌ಗಳಿಗೆ ಹೋಗಿ ಹಣ ಖರ್ಚು ಮಾಡಬೇಕಿಲ್ಲ. ಮನೆಯಲ್ಲಿಯೇ ಮಾಡಬಹುದು, ಹೇಗೆ ನೋಡಿ..
ಸಾಮಾಗ್ರಿಗಳು
ಚಿಕನ್
ಪುದೀನ
ಕೊತ್ತಂಬರಿ ಸೊಪ್ಪು
ಚಕ್ಕೆ
ಲವಂಗ
ಸೋಂಪು
ಜೀರಿಗೆ
ಹಸಿಮೆಣಸಿನಕಾಯಿ
ಶುಂಠಿ
ಬೆಳ್ಳುಳ್ಳಿ
ಕಾರ್ನ್‌ಫ್ಲೋರ್
ಎಣ್ಣೆ
ನಿಂಬೆಹುಳಿ
ಮಾಡುವ ವಿಧಾನ
ಮಿಕ್ಸಿಗೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಚೆನ್ನಾಗಿ ತೊಳೆದ ಚಿಕನ್‌ಗೆ ಈ ಹಸಿರು ಮಿಶ್ರಣವನ್ನು ಹಾಕಿ ಮ್ಯಾರಿನೇಟ್ ಆಗಲು ಬಿಡಿ
ಕನಿಷ್ಠ ಅರ್ಧಗಂಟೆಯಾದರೂ ಉಪ್ಪು ಖಾರ ಚಿಕನ್‌ಗೆ ಹತ್ತಲು ಬಿಡಿ. ಆನಂತರ ಇದನ್ನು ಪಕ್ಕಕ್ಕಿಟ್ಟು ಪ್ಯಾನ್‌ಗೆ ಎಣ್ಣೆ ಹಾಕಿ
ಎಣ್ಣೆ ಕಾದ ನಂತರ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿ, ಡ್ರೈ ಆಗುತ್ತಿದೆ ಎಂದೆನಿಸಿದಾಗ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ
ಆಮೇಲೆ ಇದನ್ನು ಮುಚ್ಚಿ ಬೇಯಿಸಿ, ಉಪ್ಪು ಖಾರ ಹೊಂದಿಕೆಯಾಗಿದೆಯಾ ಚೆಕ್ ಮಾಡಿ
ಕಡೆಗೆ ಕಾರ್ನ್‌ಫ್ಲೋರ್‌ಗೆ ನೀರನ್ನು ಹಾಕಿ ಕಲಸಿ, ಆ ನೀರನ್ನು ಚಿಕನ್‌ಗೆ ಹಾಕಿ, ನಂತರ ನಿಂಬೆಹುಳಿ ಹಿಂಡಿದ್ರೆ ಚಿಲ್ಲಿ ಚಿಕನ್ ರೆಡಿ



