ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಚಿತ್ರದಲ್ಲಿರೋ ಬಾಲಿವುಡ್ ಬೆಡಗಿ ಯಾರೆಂದು ಗುರುತಿಸಬಲ್ಲಿರಾ?
ಇವರು ಹೀರೋಯಿನ್ ಅಲ್ಲ ಬಾಲಿವುಡ್‌ನ ಫೇಮಸ್ ಹೀರೋ? ಯಾರೆಂದು ತಿಳೀತಾ? ಯೆಸ್ ನಿಮ್ಮ ಗೆಸ್ ಸರಿಯಾಗಿಯೇ ಇದೆ, ಇವರು ಆಯುಷ್ಮಾನ್ ಖುರಾನಾ!!
ಡ್ರೀಮ್ ಗರ್ಲ್ 2 ಸಿನಿಮಾಗಾಗಿ ಆಯುಷ್ಮಾನ್ ಹುಡುಗಿ ವೇಷ ತೊಟ್ಟಿದ್ದು, ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ ಎನ್ನುವಂತೆ ಸೊಂಟ ಬಳುಕಿಸಿದ್ದಾರೆ.
ಡ್ರೀಮ್ ಗರ್ಲ್ ಟ್ರೇಲರ್ ರಿಲೀಸ್ ಆಗಿದ್ದು, ಜೀವನದ ಅತೀ ಡೇಂಜರಸ್ ಪಾತ್ರ ಮಾಡೋಕೆ ಮುಂದಾಗಿದ್ದೇನೆ, ಎಲ್ಲರೂ ಟ್ರೇಲರ್ ನೋಡಿ ಹರಸಿ ಎಂದು ಮನವಿ ಮಾಡಿದ್ದಾರೆ. ಕಾಲ್ ಸೆಂಟರ್‌ನಲ್ಲಿ ಹುಡುಗರ ಜತೆ ಮಾತನಾಡಲು ಹುಡುಗಿ ವಾಯ್ಸ್‌ನಲ್ಲಿ ಆಯುಷ್ಮಾನ್ ಮಾತನಾಡಿದ್ದು, ಏನೆಲ್ಲಾ ಟ್ವಿಸ್ಟ್ ಬರಲಿದೆ ಎನ್ನುವುದೇ ಸಿನಿಮಾ, ಆಯುಷ್ಮಾನ್‌ಗೆ ಅನನ್ಯಾ ಪಾಂಡೆ ಜೋಡಿಯಾಗಿದ್ದಾರೆ.