ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ವಿರುದ್ದ ದಿನೇ ದಿನೇ ಆಕ್ರೋಶಗಳು ಹೆಚ್ಚುತ್ತಿದ್ದು, ಕೆನಡಾದ ಮಾಧ್ಯಮ ವರದಿಗಳು ಟ್ರೂಡೊ ಅವರು ರಾಜೀನಾಮೆಯನ್ನು ಪರಿಗಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಉಪ ಪ್ರಧಾನಿ ಹಾಗೂ ಟ್ರುಡೊ ಆಪ್ತೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ರಾಜೀನಾಮೆ ನೀಡಿದ ನಂತರ ಈ ಪ್ರಕ್ರಿಯೆಯು ವೇಗ ಪಡೆದುಕೊಂಡಿದ್ದು, ಒಂದೆಡೆ ತಮ್ಮದೇ ಪಕ್ಷದ ನಾಯಕರು ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಕೆನಡಾದ ಪೊಲೀಸರು ಸಹ ಕ್ರಿಮಿನಲ್ ಕೋಡ್ ತಿದ್ದುಪಡಿ ವಿಚಾರವಾಗಿ ರಾಜೀನಾಮೆಗೆ ಕರೆ ನೀಡಿದೆ.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಸ್ವಂತ ಲಿಬರಲ್ ಪಕ್ಷದ ಸದಸ್ಯರು ಟ್ರುಡೊ ಅವರ ರಾಜೀನಾಮೆಗಾಗಿ ಆಗ್ರಹಿಸಿದ್ದಾರೆ. ಸುಮಾರು 15 ಲಿಬರಲ್ ಸಂಸದರು ಈಗ ಟ್ರುಡೊ ಅವರನ್ನು ಕೆಳಗಿಳಿಸಿ ಪಕ್ಷವನ್ನು ಮುನ್ನಡೆಸಲು ಬೇರೆಯವರಿಗೆ ದಾರಿ ಮಾಡಿಕೊಡುವಂತೆ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ.
ಇದಕ್ಕೂ ಮೊದಲು ಲೇಬರ್ ಪಕ್ಷದ ಹಿರಿಯ ನಾಯಕ ಚಾಡ್ ಕಾಲಿನ್ಸ್ ಅವರು 23 ಸಂಸದರು ಟ್ರುಡೊ ರಾಜೀನಾಮೆಗೆ ಒತ್ತಾಯಿಸಿರುವ ಪತ್ರದೊಂದಿಗೆ ಬೇಡಿಕೆ ಇಟ್ಟಿದ್ದಾರೆ.
ಮತ್ತೊಂದೆಡೆ ಕ್ರಿಮಿನಲ್ ಕೋಡ್ ತಿದ್ದುಪಡಿ ಮಾಡುವ ಪ್ರಸ್ತಾಪದ ಮೇಲೆ ಕೆನಡಾದ ಪೊಲೀಸ್ ಕಾರ್ಮಿಕ ಸಂಘಟನೆ ಹಾಗೂ ಟೊರೊಂಟೊ ಪೊಲೀಸ್ ಅಸೋಸಿಯೇಷನ್ (ಟಿಪಿಎ) ಸಹ ಪ್ರಧಾನ ಮಂತ್ರಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡ ಬೇಕೆಂದು ಕರೆ ನೀಡಿದೆ. ಸರಿಯಾದ ಕಾರಣಗಳಿಗಾಗಿ ಸರಿಯಾದ ಕೆಲಸವನ್ನು ಮಾಡಲು ಟ್ರುಡೊದಲ್ಲಿ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಟಿಪಿಎ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದು ರಾಜೀನಾಮೆ ನೀಡುವ ಸಮಯ. ವಿಮರ್ಶಾತ್ಮಕವಾಗಿ ದೇಶದ ಪ್ರಮುಖವಾದ ಸಾರ್ವಜನಿಕ ಸುರಕ್ಷತಾ ಸಮಸ್ಯೆಗಳನ್ನು ಬೇರೆಯವರಿಗೆ ಬಿಟ್ಟುಬಿಡಿ ಎಂದು ಸರ್ಕಾರದ ಪ್ರಸ್ತಾವಿತ ಕಾನೂನುಗಳಿಗೆ ತಿದ್ದುಪಡಿಗಳ ಬಗ್ಗೆ ಕೆರಳಿರುವ ಪೋಲೀಸ್ ಅಸೋಸಿಯೇಷನ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದೆ.
ಟೊರೊಂಟೊ ಪೊಲೀಸ್ ಅಸೋಸಿಯೇಷನ್ ರಾಷ್ಟ್ರದ ಕ್ರಿಮಿನಲ್ ಕೋಡ್ ಅನ್ನು ತಿದ್ದುಪಡಿ ಮಾಡುವ ಪ್ರಸ್ತಾಪಗಳ ಕಾರಣದಿಂದ ಪ್ರಧಾನಿಯ ರಾಜೀನಾಮೆಗೆ ಕರೆ ನೀಡಿದೆ.