Sunday, October 1, 2023

Latest Posts

ವಿಚ್ಛೇದನ ಪತ್ರಕ್ಕೆ ಸಹಿ ಹಾಕಿದ ಕೆನಡಾ ಪ್ರಧಾನಿ ದಂಪತಿ: 18ವರ್ಷದ ದಾಂಪತ್ಯಕ್ಕೆ ಎಳ್ಳು-ನೀರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ, ತಮ್ಮ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ದಾಂಪತ್ಯಕ್ಕೆ ಬ್ರೇಕ್‌ ಬಿದ್ದಿದೆ.

ಜಸ್ಟಿನ್ ಟ್ರುಡೊ ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇಬ್ಬರೂ ಕುಳಿತು ಸುದೀರ್ಘ ಚರ್ಚೆಯ ನಂತರವಷ್ಟೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸಿದರು. ಇಬ್ಬರೂ ಕಾನೂನಾತ್ಮಕವಾಗಿ ಬೇರ್ಪಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

Canada PM Justin Trudeau

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಸೋಫಿ ಗ್ರೆಗೊಯಿರ್ ಟ್ರುಡೊ ದಂಪತಿಗೆ ಮೂವರು ಮಕ್ಕಳಿದ್ದಾರೆ. 15 ವರ್ಷದ ಕ್ಸೇವಿಯರ್, 14 ವರ್ಷದ ಎಲಾ-ಗ್ರೇಸ್, ಒಂಬತ್ತು ವರ್ಷದ ಹ್ಯಾಡ್ರಿಯನ್. ಪ್ರತ್ಯೇಕತೆಯ ಕುರಿತು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಸ್ಟಿನ್ ಟ್ರುಡೊ ಅವರು ತಮ್ಮ ಮಕ್ಕಳಿಗೆ ಕುಟುಂಬದಂತೆ ಇರುತ್ತಾರೆ ಎಂದು ಹೇಳಿದ್ದಾರೆ. ಇಬ್ಬರೂ ಮಕ್ಕಳನ್ನು ಸುರಕ್ಷಿತ, ಪ್ರೀತಿಯ ವಾತಾವರಣದಲ್ಲಿ ಬೆಳೆಸುವ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು. ಅಧಿಕಾರದಲ್ಲಿರುವಾಗಲೇ ಪತ್ನಿಯಿಂದ ಬೇರ್ಪಟ್ಟ ಎರಡನೇ ಪ್ರಧಾನಿಯಾಗಿ ಜಸ್ಟಿನ್ ಟ್ರುಡೊ ಹೆಸರು ಮುನ್ನೆಲೆಗೆ ಬಂದಿದೆ. ಮೊದಲು ಅವರ ತಂದೆ ಪಿಯರೆ ಟ್ರುಡೊ 1979 ರಲ್ಲಿ ಅವರ ಪತ್ನಿ ಮಾರ್ಗರೆಟ್‌ನಿಂದ ಬೇರ್ಪಟ್ಟ ಬಳಿಕ 1984 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

Canada PM Justin Trudeau,Sophie Gregoire Trudeau

2005 ರಲ್ಲಿ ಮಾಂಟ್ರಿಯಲ್‌ನಲ್ಲಿ ಇಬ್ಬರೂ ವಿವಾಹವಾದರು. 48 ವರ್ಷ ವಯಸ್ಸಿನ ಸೋಫಿ ಗ್ರೆಗೊಯಿರ್ ಟ್ರುಡೊ ಕ್ವಿಬೆಕ್‌ನಲ್ಲಿ ದೂರದರ್ಶನ ವರದಿಗಾರರಾಗಿಯೂ ಕೆಲಸ ಮಾಡಿದರು. ತಮ್ಮ ಪತಿ ಜಸ್ಟಿನ್ ಟ್ರುಡೊ ಪರವಾಗಿ ಮೂರು ಚುನಾವಣೆಗಳಿಗೆ ಪ್ರಚಾರ ಮಾಡಿದರು. ಮಹಿಳೆಯರ ಹಕ್ಕುಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಪ್ರತಿಪಾದಿಸುವ ಮೂಲಕ ಅವರು ಅನೇಕ ಬಾರಿ ಸುದ್ದಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!