ಅಮೆರಿಕದ ಜೊತೆಗಿನ ಹಳೆಯ ಸಂಬಂಧ ಮುಗಿದಿದೆ: ಕೆನಡಾದ ನೂತನ ಪ್ರಧಾನಿ ಕಾರ್ನೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಾಡ ಚುನಾವಣೆಯಲ್ಲಿ ಖಲಿಸ್ತಾನಿಗಳ ಬೆಂಬಲದಿಂದಲೇ ಆಯ್ಕೆಯಾಗುತ್ತಿದ್ದ ಖಲಿಸ್ತಾನಿ ಪರ ನಾಯಕ ಜಗ್ಮಿತ್ ಸಿಂಗ್ ಸೋಲು ಕಂಡಿದ್ದಾರೆ. ಕೆನಡಾದ ಲಿಬರಲ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಗಿಟ್ಟಿಸಿಕೊಂಡಿದೆ. ಲಿಬರಲ್ ಪಾರ್ಟಿ ನಾಯಕ ಮಾರ್ಕ್ ಕಾರ್ನೆ ಇದೀಗ ಕೆನಡಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ದೇಶದ ಹಳೆಯ ಸಂಬಂಧ, ನಿರಂತರವಾಗಿ ಹೆಚ್ಚುತ್ತಿರುವ ಏಕೀಕರಣವನ್ನು ಆಧರಿಸಿದ ಸಂಬಂಧ ಮುಗಿದಿದೆ ಎಂದು ಹೇಳಿದ್ದಾರೆ.

ನಾವು ಅಮೆರಿಕದ ದ್ರೋಹದ ಆಘಾತದಿಂದ ಹೊರಬಂದಿದ್ದೇವೆ, ಆದರೆ ಅದರ ಪಾಠಗಳನ್ನು ನಾವು ಎಂದಿಗೂ ಮರೆಯಬಾರದು. ನಾವು ನಮ್ಮನ್ನು ನಾವು ನೋಡಿಕೊಳ್ಳಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪರಸ್ಪರ ಕಾಳಜಿ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಟ್ರಂಪ್‌ರ ಸುಂಕ ಸಮರ ಮತ್ತು ಸ್ವಾಧೀನ ಬೆದರಿಕೆಗಳಿಂದ ಬರುವ ‘ಸವಾಲಿನ’ ದಿನಗಳ ಬಗ್ಗೆ ಎಚ್ಚರಿಕೆ ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!