ವಿವಾದಿತ ಕಾಳಿ ಪೋಸ್ಟರ್‌ ಕುರಿತು ಕ್ಷಮೆಯಾಚಿಸಿದ ಕೆನಡಾದ ಮ್ಯೂಸಿಯಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂದೂ ದೇವತೆ ಕಾಳಿಯನ್ನು ಸಿಗರೇಟು ಸೇದುತ್ತಿರುವಂತೆ ಚಿತ್ರಿಸಿದ ಸಿನಿಮಾದ ಪೋಸ್ಟರ್‌ಅನ್ನು ಪ್ರದರ್ಶಿಸಿದ್ದಕ್ಕಾಗಿ ಆಗಾಖಾನ್‌ ಮ್ಯೂಸಿಯಂ ಕ್ಷಮೆಯಾಚಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು ” ಹಿಂದೂ ಮತ್ತು ಇತರ ಧರ್ಮದ ಸಮುದಾಯಗಳ ಸದಸ್ಯರಿಗೆ ಉಂಟಾದ ಅಪರಾಧಕ್ಕೆ ತೀವ್ರ ವಿಷಾದವಿದೆ” ಎಂದು ಹೇಳಿದೆ.

ಚಲನಚಿತ್ರ ನಿರ್ದೇಶಕಿ ಲೀನಾಮಣಿಮೇಕಲೈ ಅವರು ತಮ್ಮ ಚಿತ್ರದ ಪೋಸ್ಟರ್‌ ಒಂದರಲ್ಲಿ ಹಿಂದೂ ದೇವತೆ ಕಾಳಿಯನ್ನು ಸಿಗರೇಟು ಸೇದುತ್ತಿರುವಂತೆ ಚಿತ್ರಸಿದ್ದರು. ಅಲ್ಲದೇ ಹಿನ್ನೆಲೆಯಲ್ಲಿ ಎಲ್‌ಜಿಬಿಟಿ (ಸಲಿಂಗಿ,ತೃತೀಯಲಿಂಗಿ) ಸಮುದಾಯದ ಬಾವುಟವನ್ನು ಪ್ರದರ್ಶಿಸಿದ್ದರು. ಈ ಕುರಿತು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿತ್ತು. ಅನೇಕ ಕಡೆಗಳಲ್ಲಿ ಹಿಂದು ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು. ಕೆನಡಾದಲ್ಲಿನ ಭಾರತೀಯ ಹೈಕಮೀಷನ್‌ “ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು” ಹಿಂತೆಗೆದುಕೊಳ್ಳುವಂತೆ” ಒತ್ತಾಯಿಸಿತ್ತು. ಈ ಬೆನ್ನಲ್ಲೇ ಪ್ರದರ್ಶನ ಏರ್ಪಡಿಸಿದ್ದ ಆಗಾಖಾನ್‌ ಮ್ಯೂಸಿಯಂ ಕ್ಷಮೆ ಯಾಚಿಸಿದೆ.

ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಆಯೋಜಿಸಿದ “ಅಂಡರ್ ದಿ ಟೆಂಟ್” ಎಂಬ ಯೋಜನೆಯಡಿಯಲ್ಲಿ ವಸ್ತುಸಂಗ್ರಹಾಲಯವು ವೈವಿಧ್ಯಮಯ ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳ ಚಲನಚಿತ್ರವನ್ನು ಆಹ್ವಾನಿಸಿತ್ತು. ಈ ಕುರಿತು ಇದೀಗ ಹೇಳಿಕೆ ಬಿಡುಗಡೆ ಮಾಡಿರುವ ಮ್ಯೂಸಿಯಂ “ಅಂಡರ್ ದಿ ಟೆಂಟ್” ನ 18 ಕಿರು ವೀಡಿಯೊಗಳಲ್ಲಿ ಒಂದು ಚಿತ್ರ ಮತ್ತು ಅದರ ಜೊತೆಗಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಹಿಂದೂ ಮತ್ತು ಇತರ ನಂಬಿಕೆ ಸಮುದಾಯಗಳ ಸದಸ್ಯರಿಗೆ ಅಜಾಗರೂಕತೆಯಿಂದ ಅಪರಾಧವನ್ನು ಉಂಟುಮಾಡಿದೆ ಎಂದು ಮ್ಯೂಸಿಯಂ ತೀವ್ರವಾಗಿ ವಿಷಾದಿಸುತ್ತದೆ

“ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಪ್ರಾಜೆಕ್ಟ್ ಪ್ರಸ್ತುತಿಯನ್ನು ಅಗಾ ಖಾನ್ ಮ್ಯೂಸಿಯಂನಲ್ಲಿ ಆಯೋಜಿಸಲಾಗಿದೆ, ವಸ್ತುಸಂಗ್ರಹಾಲಯವು ಕಲೆಗಳ ಮೂಲಕ ಅಂತರ್ಸಾಂಸ್ಕೃತಿಕ ತಿಳುವಳಿಕೆ ಮತ್ತು ಸಂವಾದವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದೆ. ವೈವಿಧ್ಯಮಯ ಧಾರ್ಮಿಕ ಅಭಿವ್ಯಕ್ತಿಗಳು ಮತ್ತು ನಂಬಿಕೆ ಸಮುದಾಯಗಳಿಗೆ ಗೌರವವು ನಮ್ಮ ಈ ಯೋಜನೆಯ ಮೂಲ ಉದ್ದೇಶ” ಎಂದು ತನ್ನ ಹೇಳಿಕೆಯಲ್ಲಿ ಮ್ಯೂಸಿಯಂ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!