ಕೆನಡಾದ ಪಾಪ್ ತಾರೆ ಕ್ರಿಸ್ ವುಗೆ 13 ವರ್ಷ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆನಡಾದ ಪಾಪ್ ತಾರೆ ಕ್ರಿಸ್ ವುಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಚೀನಾದ ಬೀಜಿಂಗ್ ನ ನ್ಯಾಯಾಲಯ ಆದೇಶ ನೀಡಿದೆ.

ಕೆನಡಾದ ಪಾಪ್ ತಾರೆ ಕ್ರಿಸ್ ವು ಅವರು ಅತ್ಯಾಚಾರ ಸೇರಿದಂತೆ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆ ಚೀನಾದ ನ್ಯಾಯಾಲಯವು 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಚೀನಾದ ಚಾವೊಯಾಂಗ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಶುಕ್ರವಾರ ತಿಳಿಸಿದೆ.

2020 ರ ನವೆಂಬರ್ ನಿಂದ ಡಿಸೆಂಬರ್ ವರೆಗೆ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಬೀಜಿಂಗ್ ನ ಚಾವೊಯಾಂಗ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ತಿಳಿಸಿದೆ.

ಚೀನಾ ಮೂಲದ ವು ಕೆನಡಾದ ಪ್ರಜೆಯಾಗಿದ್ದರೂ, ಚೀನಾದ ಕಾನೂನಿನ ಪ್ರಕಾರ ಅವನನ್ನು ಚೀನಾದಲ್ಲಿ ವಿಚಾರಣೆಗೊಳಪಡಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!