October 18, 2026
Sunday, October 18, 2026
spot_img

ಜಾಗಿಂಗ್‌ ಮಾಡ್ತಾ ಕ್ಯಾಶುಯಲ್‌ ಆಗಿ ಧುರಂಧರ್‌ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ನಟನೆಯ ಧುರಂಧರ್‌ 2 ಸಿನಿಮಾ ಇನ್ನೇನು ರಿಲೀಸ್‌ಗೆ ರೆಡಿಯಿದೆ. ಈ ಮಧ್ಯೆ ಸಿನಿಮಾ ವಿಶ್ವಮಟ್ಟದಲ್ಲಿಯೂ ಸದ್ದು ಮಾಡುತ್ತಿರುವುದು ಕಾಣಿಸಿದೆ.

ಫಿನ್‌ಲ್ಯಾಂಡ್‌ ಅಧ್ಯಕ್ಷ ಮತ್ತು ಕೆನಡಾ ಪ್ರಧಾನಿ ಇಬ್ಬರೂ ಪಾರ್ಕ್‌ನಲ್ಲಿ ಬೆಳಗ್ಗೆ ಜಾಗಿಂಗ್‌ ಮಾಡುತ್ತ ಧುರಂಧರ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದು ಬಾಲಿವುಡ್‌ ಫ್ಯಾನ್ಸ್‌ಗೆ ಖುಷಿ ನೀಡಿದೆ.

ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅವರ ಪತ್ನಿಯೊಂದಿಗೆ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಜಾಗಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾರ್ನಿ ಅವರ ಯುಕೆ ಅಧಿಕೃತ ಭೇಟಿಯ ಸಮಯದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಜಾಗಿಂಗ್‌ ಮಾಡಿರುವುದು ಕಂಡುಬಂದಿದೆ.

ಸ್ಟಬ್ ಮತ್ತು ಕಾರ್ನಿ ಜಾಗಿಂಗ್ ಮಾಡುವಾಗ ಚಿಕ್ಕ ಸಂಭಾಷಣೆ ನಡೆಸಿದ್ದಾರೆ. ಕಾರ್ನಿ, ಫಿನ್‌ಲ್ಯಾಂಡ್‌ ಅಧ್ಯಕ್ಷರನ್ನು ಭಾರತದಲ್ಲಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಕೇಳುತ್ತಾರೆ. ‘ಹಿಂದಿ ಚಲನಚಿತ್ರ ಧುರಂಧರ್ ನೋಡಿದೆ ಅಂತ ಹೇಳಿದ ಬೆನ್ನಲ್ಲೇ ಅದು ಒಳ್ಳೆ ಸಕ್ಸಸ್‌ ಪಡೆದಿದೆ’ ಅಂತ ಸ್ಟಬ್ ಪ್ರತಿಕ್ರಿಯಿಸುತ್ತಾರೆ

Must Read