ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸಲಾಗಿದ್ದು, ಈ ಮೂಲಕ ಹಲವು ಉದ್ಯಮಗಳಿಗೆ ಮತ್ತೆ ಜೀವ ಬಂದಂತಾಗಿದೆ.
ನಾಳೆಯಿಂದ ಶನಿವಾರ ಮತ್ತು ಭಾನುವಾರದ ಕರ್ಪ್ಯೂ ರದ್ದುಗೊಳ್ಳಲಾಗಿದ್ದು, ಈ ಮೂಲಕ ಎಣ್ಣೆಪ್ರಿಯರಿಗೆ ನಾಳೆ,ನಾಳಿದ್ದು ಮದ್ಯ ಸಿಗಲಿದೆ.
ಇನ್ನು ಹೊಟೇಲ್ ಉದ್ಯಮಕ್ಕೂ ಕರ್ಪ್ಯೂ ರದ್ದು ಸಂತಸ ನೀಡಿದ್ದು, ಸಿಎಂ ನಿರ್ಧಾರವನ್ನು ಸ್ವಾಗತಿಸಿದೆ.