ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸರಳ ವಿಧಾನವೊಂದನ್ನು ಅಭಿವೃದ್ಧಿಪಡಿಸಲಾಗಿದೆ.
ಬ್ರಿಟನ್ ವೈದ್ಯಕೀಯ ವಿಜ್ಞಾನಿಗಳು ಕೇವಲ ಏಳು ನಿಮಿಷಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೀಡಬಹುದಾದ ಟೆಸೆಂಟ್ರಿಕ್ ಇಂಜೆಕ್ಷನ್‌ನ್ನು ಅಭಿವೃದ್ಧಿಪಡಿಸಿದ್ದಾರೆ.
ವಿಶ್ವದಲ್ಲೇ ಮೊದಲಾದ ಈ ಇಂಜೆಕ್ಷನ್‌ನ್ನು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆ ಬಿಡುಗಡೆ ಮಾಡಿದೆ. ಈಗಾಗಲೇ ನೂರಾರು ರೋಗಿಗಳಿಗೆ ಇಂಜೆಕ್ಷನ್ ನೀಡಲಾಗಿದ್ದು, ಕ್ಯಾನ್ಸರ್ ಚಿಕಿತ್ಸೆಯ ಸಂಕೀರ್ಣತೆಯನ್ನು ಇದು ಕಡಿಮೆ ಮಾಡುತ್ತದೆ.
ಇಂಜೆಕ್ಷನ್‌ಗೆ ಅನುಮೋದನೆ ಸಿಕ್ಕಿದೆ, ಇದರಿಂದಾಗಿ ಎಷ್ಟೆಲ್ಲಾ ರೋಗಿಗಳಿಗೆ ಅನುಕೂಲವಾಗಿದೆ. ವೇಗದ ಆರೈಕೆಯಿಂದ ರೋಗಿಗಳ ಮಾನಸಿಕ ಸ್ಥಿತಿಯಲ್ಲಿಯೂ ಉತ್ತಮ ಬದಲಾವಣೆಯಾಗಲಿದೆ. ಹೆಚ್ಚು ರೋಗಿಗಳಿಗೆ ಚುಚ್ಚುಮದ್ದು ನೀಡಿ ಜೀವ ಉಳಿಸಬೇಕಿದೆ ಎಂದು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿಯ ಆನ್‌ಕಾಲಜಿಸ್ಟ್ ಡಾ. ಅಲೆಕ್ಸಾಂಡರ್ ಮಾರ್ಟಿನ್ ಹೇಳಿದ್ದಾರೆ.
ಈ ಹಿಂದೆ ಚುಚ್ಚುಮದ್ದನ್ನು ಡ್ರಿಪ್ ಮೂಲಕ ನೀಡಲಾಗುತ್ತಿತ್ತು. ಇದು ರಕ್ತದಾಳಗಳ ಒಳಗೆ ಹರಿದು ಹೋಗಲು ಒಂದು ಗಂಟೆ ಬೇಕಿತ್ತು. ಆದರೆ ಈ ಇಂಜೆಕ್ಷನ್ ಏಳು ನಿಮಿಷದಲ್ಲಿ ರಕ್ತದಾಳ ಸೇರಲಿದೆ.