ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಳ ಹಾಗೂ ರುಚಿಕರವಾದ ಸಬ್ಬಕ್ಕಿ ದೋಸೆ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು:
* ಸಬ್ಬಕ್ಕಿ
*ಅಕ್ಕಿ ಹುಡಿ
*ಮೊಸರು-
*ಹಸಿಮೆಣಸು
*ಕೊತ್ತಂಬರಿ ಸೊಪ್ಪು
*ತುರಿದ ಕ್ಯಾರೆಟ್
*ಈರುಳ್ಳಿ
*ತೆಂಗಿನ ತುರಿ
*ಉಪ್ಪು
*ಎಣ್ಣೆ/ತುಪ್ಪ
ಮಾಡುವ ವಿಧಾನ:
* ಮೊದಲಿಗೆ ಸಬ್ಬಕ್ಕಿಯನ್ನು 3-4 ಗಂಟೆಗಳ ಕಾಲ ನೆನೆಸಿಡಿ.
* ನಂತರ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ.
* ಈಗ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕ್ಯಾರೆಟ್ ಕರಿಬೇವಿನೆಸಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
* ನಂತರ ನೆನಸಿಟ್ಟ ಸಬ್ಬಕ್ಕಿಗೆ ಮೊಸರು, ಅಕ್ಕಿಹುಡಿ ತೆಂಗಿನ ತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅಗತ್ಯವಿದ್ದಷ್ಟು ನೀರನ್ನು ಮಿಶ್ರ ಮಾಡಿಕೊಳ್ಳಿ
* ದೋಸೆ ಹಿಟ್ಟು ಹಾಲಿನಷ್ಟು ಗಟ್ಟಿಯಾಗಿರಲಿ. ನಂತರ ಹೆಚ್ಚಿಟ್ಟ ತರಕಾರಿಗಳನ್ನು ದೋಸೆ ಮಿಶ್ರಣಕ್ಕೆ ಸೇರಿಸಿ.
* ಈಗ ಒಲೆ ಮೇಲೆ ತವಾ ಇಡಿ, ಅದು ಬಿಸಿಯಾಗುತ್ತಿದ್ದಂತೆ ಸ್ವಲ್ಪ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹರಡಿ.
* ದೋಸೆಯನ್ನು 3-4 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.