ಪಾಕ್ ಚುನಾವಣಾ ಕಣದಲ್ಲಿ ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಪಕ್ಷದ ಅಭ್ಯರ್ಥಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ (Mumbai Terror Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ಬೆಂಬಲಿತ ಪಕ್ಷ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್‌ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML) ಮುಂಬರುವ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2024 ರ ಫೆಬ್ರವರಿ 8 ರಂದು ಚುನಾವಣೆ (Pakistan Election) ನಡೆಯಲಿದೆ.

ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಕೂಡ ಸ್ಪರ್ಧಿಸುತ್ತಿದ್ದಾನೆ. ಮೂಲಗಳ ಪ್ರಕಾರ ಈತ ಪಾಕಿಸ್ತಾನ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾನೆ. ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಕ್ಲರಿಕ್ ಆಗಿರುವ ತಲ್ಹಾ ಸಹೀದ್, ಚುನಾವಣೆ ಅಖಾಡಕ್ಕೆ ಧುಮುಕಿದ್ದಾನೆ.

2019ರಿಂದ ಹಫೀಜ್ ಸಯೀದ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣ ಒಂದರಲ್ಲಿ ಜೈಲು ಸೇರಿದ್ದಾನೆ. ಆದರೆ ಈತ ಜೈಲಿನಲ್ಲದ್ದರೂ ಪಾಕಿಸ್ತಾನ ಸೀಕ್ರೆಟ್ ಎಜೆಂಟ್ ಐಎಸ್ಐ, ಪಾಕಿಸ್ತಾನ ಸೇನೆ, ಪಾಕಿಸ್ತಾನ ಪೊಲೀಸ್ ಈತನ ಅಣತಿಯಂತೆ ನಡೆಯುತ್ತಿದೆ. ಪಕ್ಷದ ಚುನಾವಣೆ ಚಿಹ್ನೆ ಕುರ್ಚಿ ಎಂದು ಪಕ್ಷದ ಚುನಾವಣೆ ವಕ್ತಾರ ತಬೀಶ್ ಖಾಯುಮ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!