ಜಾನ್ಸನ್ ಬೇಬಿ ಪೌಡರ್​ ಅನ್ನು ಉತ್ಪಾದಿಸಿ ಆದ್ರೆ ಮಾರಾಟ ಮಾಡುವಂತಿಲ್ಲ: ಬಾಂಬೆ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಹಾರಾಷ್ಟ್ರ ಎಫ್​ಡಿಎ ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಜಾನ್ಸನ್ ಬೇಬಿ ಪೌಡರ್​ನ ಉತ್ಪಾದನಾ ಲೈಸೆನ್ಸ್​ ಅನ್ನು ಈ ಹಿಂದೆ ರದ್ದುಗೊಳಿಸಿತ್ತು.ಇದೀಗ ಮಹಾರಾಷ್ಟ್ರ ಸರ್ಕಾರದ ಆದೇಶದಂತೆ ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) ಬೇಬಿ ಪೌಡರ್ ಮಾದರಿಗಳನ್ನು ಹೊಸದಾಗಿ ಪರೀಕ್ಷಿಸಲು ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ. ಆದರೆ ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನವನ್ನು ತಯಾರಿಸಬಹುದು, ಮಾರಾಟ ಮಾಡುವಂತಿಲ್ಲ ಎಂದು ಕಂಪನಿಗೆ ಸೂಚಿಸಿದೆ.

ಮಹಾರಾಷ್ಟ್ರ ಸರಕಾರ ನೀಡಿದ ಆದೇಶ ಪ್ರಶ್ನಿಸಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇಂದು ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಎಸ್ ಜಿ ಡಿಗೆ ಅವರ ವಿಭಾಗೀಯ ಪೀಠವು ಮುಂಬೈನ ಮುಲುಂಡ್ ಪ್ರದೇಶದಲ್ಲಿನ ಕಂಪನಿಯ ಕಾರ್ಖಾನೆಯಿಂದ ಹೊಸ ಮಾದರಿಗಳನ್ನು 3 ದಿನಗಳಲ್ಲಿ ಸಂಗ್ರಹಿಸುವಂತೆ ಎಫ್‌ಡಿಎಗೆ ಸೂಚಿಸಿದೆ.

ಈ ಮಾದರಿಗಳನ್ನು ಸೆಂಟ್ರಲ್ ಡ್ರಗ್ ಟೆಸ್ಟಿಂಗ್ ಲ್ಯಾಬೊರೇಟರಿ, ಎಫ್‌ಡಿಎ ಲ್ಯಾಬ್ ಮತ್ತು ಇಂಟರ್‌ಟೆಕ್ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಲ್ಯಾಬ್‌ಗಳು ಅದರ ನಂತರ 1 ವಾರದೊಳಗೆ ವರದಿಯನ್ನು ಸಲ್ಲಿಸುತ್ತವೆ ಎಂದು ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಹೈಕೋರ್ಟ್ ಮುಂದೂಡಿದೆ.

ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಜಂಟಿ ಆಯುಕ್ತರು ಮತ್ತು ಪರವಾನಗಿ ಪ್ರಾಧಿಕಾರವು ಸೆಪ್ಟೆಂಬರ್ 15ರಂದು ಒಂದು ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಸೆಪ್ಟೆಂಬರ್ 20ರಂದು ಜಾನ್ಸನ್ ಬೇಬಿ ಪೌಡರ್ ಉತ್ಪನ್ನದ ಉತ್ಪಾದನೆ ಮತ್ತು ಮಾರಾಟವನ್ನು ತಕ್ಷಣವೇ ನಿಲ್ಲಿಸಲು ಆದೇಶ ನೀಡಲಾಗಿತ್ತು.

ಜಾನ್ಸನ್ ಬೇಬಿ ಪೌಡರ್​​ನಲ್ಲಿ ನಿಗದಿತಕ್ಕಿಂತ ಹೆಚ್ಚಿನ pH ಮಟ್ಟ ಹೆಚ್ಚಿದೆ ಎಂಬುದು ಪರೀಕ್ಷೆ ವೇಳೆ ದೃಢಪಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!