ಲಕ್ನೋ ಗೆ ಕೈಕೊಟ್ಟ ನಾಯಕ ಪಂತ್: ಪಂಜಾಬ್ ಗೆಲುವಿಗೆ 172 ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171 ರನ್ ಗಳಿಸಿತು.

ಟಾಸ್​ ಗೆಸೋತು ಬ್ಯಾಟಿಂಗ್ ಇಳಿದ ಲಕ್ನೋ ಪರ ನಿಕೋಲಸ್ ಪೂರನ್, ಆಯುಷ್ ಬದೋನಿ ಮತ್ತು ಅಬ್ದುಲ್ ಸಮದ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.ಪಂತ್ ಮತ್ತೊಮ್ಮೆ ವಿಫಲರಾದರು.

ಮಿಚೆಲ್ ಮಾರ್ಷ್ ಗೋಲ್ಡನ್ ಡಕ್ ಆದರು. ಮಾರ್ಕ್ರಮ್ 18 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 28 ರನ್​ಗಳಿಸಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ರಿಷಭ್ ಪಂತ್ ಕೇವಲ 2 ರನ್​ಗಳಿಸಿ ಔಟ್ ಆಗುವ ಮೂಲಕ ಸತತ 3ನೇ ಪಂದ್ಯದಲ್ಲೂ ವಿಫಲರಾದರು.

ಕೇವಲ 35 ರನ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ಸಂದರ್ಭದಲ್ಲಿ ಒಂದಾದ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ 54 ರನ್ಗಳ ಜೊತೆಯಾಟ ನೀಡಿದರು. ಪೂರನ್ 30 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ಗಳ ಸಹಿತ 44 ರನ್​ಗಳಿಸಿ ಚಹಲ್​ ಬೌಲಿಂಗ್​​ನಲ್ಲಿ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಡೇವಿಡ್ ಮಿಲ್ಲರ್ 18 ಎಸೆತಗಳಲ್ಲಿ 3 ಬೌಂಡರಿ ಸಹಿತ 19ರನ್​ಗಳಿಸಿ ಪೆವಿಲಿಯನ್​ಗೆ ಮರಳಿದರು.

19ನೇ ಓವರ್​ನಲ್ಲಿ ಮಾರ್ಕೊ ಜಾನ್ಸನ್ ಕೇವಲ 8 ರನ್ ಬಿಟ್ಟುಕೊಟ್ಟರೆ, 20ನೇ ಓವರ್​​ನಲ್ಲಿ ಅರ್ಶದೀಪ್ ಇವರಿಬ್ಬರನ್ನ ಔಟ್ ಮಾಡಿ ಕೇವಲ 7 ರನ್​ ಬಿಟ್ಟುಕೊಟ್ಟರು. ಬದೋನಿ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 43 ರನ್, ಸಮದ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ಗಳ ಸಹಿತ 27 ರನ್​ಗಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!