ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಪ್ಟನ್ ರಜತ್ ಅರ್ಧಶತಕ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ವಿರುದ್ಧ 196 ರನ್ ಗಳಿಸಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆತಿಥೇಯ ತಂಡ ನಿರ್ಧಾರ ಮಾಡಿತ್ತು. ಅದರಂತೆ ಬ್ಯಾಟಿಂಗ್ ಇಳಿದ ಬೆಂಗಳೂರು ತಂಡ ಆರಂಭದಿಂದಲೇ ಸ್ಫೋಟಕ ಆಟ ನಡೆಸಿದರು. ಫಿಲ್ ಸಾಲ್ಟ್ (32) ಕಳೆದ ಪಂದ್ಯದಂತೆಯೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ 31, ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.ದೇವದತ್ ಪಡಿಕ್ಕಲ್ 27 ರನ್ ಗಳ ಕೊಡುಗೆ ನೀಡಿದರು.
ಜಿತೇಶ್ ಶರ್ಮಾ 12, ಲಿಯಾಮ್ ಲಿವಂಗ್ಸ್ಟೋನ್ 10 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ 8 ಎಸೆತಗಳಲ್ಲಿ 3 ಸಿಕ್ಸರ್, ಒಂದು ಬೌಂಡರಿ ಸಹಿತ ಅಜೇಯ 22 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.