ನಾಯಕನ ಬೊಂಬಾಟ್ ಆಟ: ಭಾರತಕ್ಕೆ 10 ವಿಕೆಟ್‌ ಗಳ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಮ್‌ ಇಂಡಿಯಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದು ಬಿಗಿದೆ.
ಮೊದಲಿಗೆ ಬೌಲಿಂಗ್‌ನಲ್ಲಿ ಮಿಂಚಿದ ಟೀಮ್‌ ಇಂಡಿಯಾ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಕೇವಲ 110 ರನ್‌ಗಳಿಗೆ ಕಟ್ಟಿಹಾಕಿತ್ತು. ಪ್ರತಿಯಾಗಿ ಈ ಮೊತ್ತವನ್ನು 18.4 ಓವರ್‌ಗಳಲ್ಲಿ114 ರನ್‌ ಸಿಡಿಸುವ ಮೂಲಕ ಭಾರತ ಗೆಲುವು ಕಂಡಿತು.
ಭರ್ಜರಿ ಬ್ಯಾಟಿಂಗ್‌ ಮಾಡಿದ ನಾಯಕ ರೋಹಿತ್ ಶರ್ಮ ಕೇವಲ 58 ಎಸೆತಗಳಲ್ಲಿ ಆಕರ್ಷಕ ಅಜೇಯ 76 ರನ್ ಬಾರಿಸಿದರು
ಇವರಿಗೆ ಉತ್ತಮ ಸಾಥ್‌ ನೀಡಿದ ಮತ್ತೊಬ್ಬ ಅನುಭವಿ ಬ್ಯಾಟ್ಸ್‌ ಮನ್‌ ಶಿಖರ್‌ ಧವನ್‌ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದರು. 54 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟ್ಸ್‌ ಮನ್‌ 4 ಬೌಂಡರಿಗಳೊಂದಿಗೆ 31 ರನ್‌ ಬಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!