ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಬೆಳಿಗ್ಗೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಆವಾಂತರಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೆದ್ದಾರಿಯಲ್ಲಿದ್ದ ರಸ್ತೆ ಹೊಂಡಕ್ಕೆ ಕಾರು ಬಿದ್ದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು ನಜ್ಜುಗುಜ್ಜಾದ ಘಟನೆ ಸಂಭವಿಸಿದ್ದು, ಕಾರಿನ ಚಾಲಕಿ ಅಪಾಯದಿಂದ ಪಾರಾಗಿದ್ದಾರೆ.
ಮಣಿಪಾಲಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದಾಗ ಕಾಪುವಿನ ತಹಶೀಲ್ದಾರ್ ಕಚೇರಿ ಮುಂಭಾಗ ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಹೊಂಡವು ಚಾಲಕಿಗೆ ಕಾಣಿಸಿಲ್ಲ. ಹೆದ್ದಾರಿಯ ಹೊಂಡಕ್ಕೆ ಬಿದ್ದ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಸ್ಥಳಕ್ಕೆ ಕಾಪು ಪೋಲಿಸರು, ಸ್ಥಳೀಯರು ಮತ್ತು ಮೆಸ್ಕಾಂ ಸಿಬ್ಬಂದಿಗಳ ಸಹಾಯದಿಂದ ಕಾರನ್ನು ತೆರವುಗೊಳಿಸಿ, ತುಂಡಾದ ವಿದ್ಯುತ್ ಕಂಬದ ದುರಸ್ಥಿ ಕಾರ್ಯ ನಡೆಸುತ್ತಿದ್ದಾರೆ.