ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯಲ್ಲಿ ಕೃಷ್ಣಾ ನದಿಯ ಮೇಲಿನ ಅಂಕಲಿ ಸೇತುವೆಯಿಂದ ಕಾರೊಂದು ಬಿದ್ದು ಮೂವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಪ್ರಸಾದ್ ಭಾಲಚಂದ್ರ ಖೇಡೇಕರ್ ಮತ್ತು ಪತ್ನಿ ಪ್ರೇರಣಾ ಪ್ರಸಾದ್ ಖೇಡೇಕರ್ ಹಾಗೂ ವೈಷ್ಣವಿ ಸಂತೋಷ್ ನಾರ್ವೇಕರ್ ಎಂದು ಗುರುತಿಸಲಾಗಿದೆ.
ಸಮರ್ಜಿತ್ ಪ್ರಸಾದ ಖೇಡೇಕರ್ ವರದ ಸಂತೋಷ್ ನಾರ್ವೇಕರ್ ಮತ್ತು ಸಾಕ್ಷಿ ಸಂತೋಷ್ ನಾರ್ವೇಕರ್ ಅಪಘಾತದಲ್ಲಿ ಗಾಯಗೊಂಡವರು ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಜೈಸಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.