ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದೋಡಾದ ಪ್ರೇಮ್‌ನಗರ ಪ್ರದೇಶದಲ್ಲಿ ಕಾರೊಂದು ಚೆನಾಬ್ ನದಿಗೆ ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ವರದಿ ಮಾಡಿವೆ.
“ದೋಡಾದ ಪ್ರೇಮ್‌ನಗರ ಪ್ರದೇಶದಲ್ಲಿ ಕಾರೊಂದು ನದಿಗೆ ಉರುಳಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ” ಎಂದು ಥಾತ್ರಿ ಎಸ್‌ಡಿಎಂ ಅಥರ್ ಅಮೀನ್ ಜರ್ಗರ್ ಹೇಳಿದ್ದಾರೆ.
ಅಪಘಾತದಲ್ಲಿ ಬಲಿಯಾದವರ ಪತ್ತೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
“ಇದೀಗ ದೋಡಾ ಡಿಸಿ ಪಾಲ್ ಮಹಾಜನ್ ಅವರೊಂದಿಗೆ ಮಾತನಾಡಿದ್ದೇನೆ. ನಾಲ್ಕು ಜನರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಕಾರೊಂದು ಆಕಸ್ಮಿಕವಾಗಿ ಥಾತ್ರಿ ಮತ್ತು ಪ್ರೇಮ್ ನಗರ್ ನಡುವಿನ ಶಿಬ್ನೋಟ್‌ನಲ್ಲಿ ಚೆನಾಬ್ ನದಿಗೆ ಆಳವಾಗಿ ಮುಳುಗಿದೆ. ಸಂತ್ರಸ್ತರನ್ನು ಪತ್ತೆಹಚ್ಚಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.