ಹಿಮಾಚಲ ಪ್ರದೇಶದ ಎರಡು ಕ್ಷೇತ್ರಗಳಲ್ಲಿ ಇಂದು ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಹಿಮಾಚಲ ಪ್ರದೇಶದ ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಕೊನೆಯ ಸುತ್ತಿನ ಪ್ರಚಾರ ಕಾರ್ಯ ನಡೆಯುತ್ತಿದ್ದು, ಭಾರತದ ಎಲ್ಲಾ ಪ್ರಭಾವಿ ನಾಯಕರು ಇನ್ನೆರಡು ದಿನ ಹಿಮಾಚಲ ಪ್ರದೇಶದಲ್ಲಿ ಇರಲಿದ್ದಾರೆ.

ಪ್ರಧಾನಿ ಮೋದಿ ಕಾಂಗ್ರಾ ಜಿಲ್ಲೆಯ ಶಾಹಪುರ್‌ನಲ್ಲಿರುವ ಚಂಬಿ ಮೈದಾನದಲ್ಲಿ ಹಾಗೂ ಹಮೀರ್‌ಪುರ ಜಿಲ್ಲೆಯ ಸುಜನ್‌ಪುರದಲ್ಲಿ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ. ಪ್ರಧಾನಿ ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದ್ದು, ಬಿಗಿ ಪೊಲೀಸ್ ಭದ್ರತೆ ಇದೆ. ಪ್ರಧಾನಿ ಮೋದಿ ಕಳೆದ ಎಂಟು ವರ್ಷದಲ್ಲಿ ಎರಡನೇ ಬಾರಿ ಸುಜನ್‌ಪುರಕ್ಕೆ ಭೇಟಿ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!