March 16, 2026
Monday, March 16, 2026
spot_img

ಟು ವ್ಹೀಲರ್‌ಗೆ ಡಿಕ್ಕಿಯಾದ ಕಾರ್: ಅಪ್ಪ-ಮಗನಿಗೆ ಗಂಭೀರ ಗಾಯ‌

ಹೊಸದಿಗಂತ ವರದಿ ಅಂಕೋಲಾ:

ಸ್ಕೂಟಿ ಮಾದರಿಯ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ತಂದೆ ಮತ್ತು ಮಗ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಿಂಗನಮಕ್ಕಿ ಕ್ರಾಸ್ ಅಂಕೋಲಾ ಗೋಕರ್ಣ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ದ್ವಿಚಕ್ರ ವಾಹನ ಸವಾರ ಅಂಕೋಲಾ ಮಂಜಗುಣಿ ನಿವಾಸಿ ಜಗದೀಶ ಗಣೇಶ ನಾಯ್ಕ(34) ಮತ್ತು ಹಿಂಬದಿ ಸವಾರ ಗಣೇಶ ಜಟ್ಟಿ ನಾಯ್ಕ(76) ಗಾಯಗೊಂಡವರಾಗಿದ್ದು ಇವರು ತಮ್ಮ ಸ್ಕೂಟಿ ವಾಹನದಲ್ಲಿ ಅಂಕೋಲಾ ಕಡೆಯಿಂದ ಮಂಜಗುಣಿ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂಜಗುಣಿ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಕೆ.ಎ30 ಎನ್ 4024 ನೋಂದಣಿ ಸಂಖ್ಯೆಯ ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ಸಿಂಗನಮಕ್ಕಿ ಕ್ರಾಸ್ ಬಳಿ ಬಲಕ್ಕೆ ಹೋಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೂ ಕೈ,ಕಾಲು,ಮುಖಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಕಾರು ಚಾಲಕ ಬಂಕಿಕೊಡ್ಲ ನಿವಾಸಿ ಶ್ರೀರಾಮ ನಾಡಕರ್ಣಿ ಎನ್ನುವವರ ಮೇಲೆ ದೂರು ದಾಖಲಾಗಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !