ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ನಿಯಂತ್ರಣ ತಪ್ಪಿ ಕಾರೊಂದು ಕಣಿವೆಗೆ ಉರುಳಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ರಾಂಬಾನ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಖ್ರಾಲ್ನಿಂದ ಮಲಿಂಗಾವ್ಗೆ ಕಾರ್ ತೆರಳುತ್ತಿತ್ತು.
ಮಲಿಂಗಾವ್ ಸಮೀಪ ಜಾರಿ ಕಣಿವೆಗೆ ಕಾರ್ ಉರುಳಿ ಬಿದ್ದಿದೆ. ಇದರಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
Road accident Ukhrall DC RAMBAN assistance:₹1 lakh to the next of kin of each deceased & ₹50K to the injured pic.twitter.com/Td1IGTZAFQ
— Khursheed Ahmed (@KhurshedBanihal) March 4, 2024