HEALTH CARE | ಹಣ್ಣು ತಿನ್ನುವ ಮೊದಲು ಇದನ್ನ ಫಾಲೋ ಮಾಡಲ್ವಾ? ಇಲ್ಲ ಅನ್ನೋದಾದ್ರೆ ರೂಢಿ ಮಾಡಿಕೊಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರುಕಟ್ಟೆಯಲ್ಲಿ ಸಾಕಷ್ಟು ವಿಧವಿಧವಾದ ಹಣ್ಣುಗಳು ತುಂಬಿವೆ. ಕಪ್ಪು ಮತ್ತು ಹಸಿರು ದ್ರಾಕ್ಷಿಗಳು, ಸ್ಟ್ರಾಬೆರಿಗಳು, ಕಿತ್ತಳೆ, ರಸಭರಿತವಾದ ಹಣ್ಣುಗಳು ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಸೃಷ್ಟಿ ಮಾಡಿದೆ. ನಾವು ಮನೆಗೆ ಸಾಕಷ್ಟು ಹಣ್ಣುಗಳನ್ನು ತರುತ್ತೇವೆ. ಮಕ್ಕಳು ಮನೆಮಂದಿ ಜೊತೆ ಕೂತು ತಿನ್ನುತ್ತೇವೆ. ಆದರೆ ನಾವು ತಿನ್ನುವ ಮೊದಲು, ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಹಣ್ಣನ್ನು ತಿನ್ನುವ ಮೊದಲು ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ.

Salt water Washing Fruits

ಹಣ್ಣುಗಳನ್ನು ತಿನ್ನುವ ಮೊದಲು, ಅವುಗಳನ್ನು ನೀರಿನಿಂದ ತೊಳೆಯುವುದು ಸಾಕಾಗುವುದಿಲ್ಲ. ಹಣ್ಣನ್ನು ತಿನ್ನುವಾಗ ನಮ್ಮನ್ನು ಕಾಡುವ ಪ್ರಶ್ನೆಯೆಂದರೆ ನಾವು ತಿನ್ನುವ ಹಣ್ಣು ರಾಸಾಯನಿಕ ಮುಕ್ತವಾಗಿದೆಯೇ ಎಂಬುದು. ಹೆಚ್ಚಿನ ಕೀಟನಾಶಕಗಳನ್ನು ಮುಖ್ಯವಾಗಿ ರಸಭರಿತ ಹಣ್ಣುಗಳ ಮೇಲೆ ಸಿಂಪಡಿಸಲಾಗುತ್ತದೆ. ಅದಕ್ಕಾಗಿಯೇ ನೀವು ತಿನ್ನುವ ಮೊದಲು ಬಹಳ ಜಾಗರೂಕರಾಗಿರಬೇಕು.

ripe and juicy fruits, hands wash fruits under running water

ತೊಳೆಯಲು ಸುಲಭವಾದ ಮಾರ್ಗವೆಂದರೆ ಹಣ್ಣುಗಳನ್ನು ಕನಿಷ್ಠ 20 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ನೆನೆಸಿಡುವುದು. ಉಪ್ಪು ನೀರಿನಲ್ಲಿ ನೆನೆಸಿ ನಂತರ ನೀರಿನಲ್ಲಿ ತೊಳೆಯುವ ಮೂಲಕ ಹಣ್ಣುಗಳನ್ನು ತಿನ್ನಬಹುದು.

Why is it Important to Wash Fruits and Vegetables before Eating?

ಹಣ್ಣುಗಳನ್ನು ಇತರ ಶುಚಿಗೊಳಿಸುವ ವಿಧಾನಗಳು ಕೂಡ ನಾವು ನೋಡಬಹುದು. ನೀವು ವಿನೆಗರ್ ಮತ್ತು ನೀರಿನ ಮಿಶ್ರಣದಿಂದ ತೊಳೆಯಬಹುದು. ನೀರು ಮತ್ತು ವಿನೆಗರ್ ಮಿಶ್ರಣ ಮಾಡಿ ಮತ್ತು ಅದರಲ್ಲಿ ಹಣ್ಣನ್ನು 10-15 ನಿಮಿಷಗಳ ಕಾಲ ತೊಳೆಯಿರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!