Monday, September 25, 2023

Latest Posts

VIRAL VIDEO| ರೋಬೋಟ್ ಆದ ಕಾರು, ನೋಡಿದರೆ ಆಶ್ಚರ್ಯಚಕಿತರಾಗೋದು ಪಕ್ಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಉದ್ಯಮಿ ‘ಆನಂದ್ ಮಹೀಂದ್ರ’ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೆಚ್ಚಿನ ವಿಷಯಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ನೀಡದರು ಆಶ್ಚರ್ಯಗೊಳ್ಳು ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ನಾವು ಕೆಲವು ಹಾಲಿವುಡ್ ಚಲನಚಿತ್ರಗಳಲ್ಲಿ ಮಾತ್ರ ರಸ್ತೆಯಲ್ಲಿ ಓಡುತ್ತಿರುವ ಕಾರು ಇದ್ದಕ್ಕಿದ್ದಂತೆ ರೋಬೋಟ್ ಆಗಿ ಬದಲಾಗುವುದನ್ನು ನೋಡಿದ್ದೇವೆ. ಆನಂದ್ ಮಹೀಂದ್ರಾ ಶೇರ್ ಮಾಡಿರುವ ವಿಡಿಯೋದಲ್ಲಿ ಬಿಎಂಡಬ್ಲ್ಯು ಕಾರು ಕೂಡ ರೋಬೋಟ್ ಆಗಿ ಬದಲಾಗಿದೆ.

ಈ ಪ್ರಯೋಗವನ್ನು 2016 ರಲ್ಲಿ ಟರ್ಕಿಯ ಕಾರು ಕಂಪನಿ ಮಾಡಿತ್ತು. ಇದನ್ನು ನೋಡಿ ಅಲ್ಲಿದ್ದವರೆಲ್ಲರೂ ತಮ್ಮ ತಮ್ಮ ಫೋನ್‌ಗಳಲ್ಲಿ ವಿಡಿಯೋ ತೆಗೆದುಕೊಂಡರು. ಮಕ್ಕಳು ಮತ್ತು ದೊಡ್ಡವರು ಸಹ ಆಶ್ಚರ್ಯದಿಂದ ಚಪ್ಪಾಳೆ ತಟ್ಟಿದರು. ಆನಂದ್ ಮಹೀಂದ್ರಾ ಅವರಿಗೂ ಖುಷಿಯಾಗಿದ್ದು, iಇದೀಗ ಈ ವಿಡಿಯೋವನ್ನು ಮಹೀಂದ್ರಾ ಆಟೋಮೋಟಿವ್ ಟೆಕ್ನಾಲಜಿಯ ಅಧ್ಯಕ್ಷರಾದ ‘ವೇಲು ಮಹೀಂದ್ರಾ’ ಅವರನ್ನು ಟ್ಯಾಗ್ ಮಾಡಿದ್ದಾರೆ. ವಿನ್ಯಾಸಗೊಳಿಸಿ ಪ್ರದರ್ಶಿಸಲಾದ ಟ್ರಾನ್ಸ್‌ಫಾರ್ಮರ್ ನಮ್ಮ R&D ಯಲ್ಲೂ ಇದೇ ರೀತಿಯ ಫನ್‌ ಇರಬೇಕು ಎಂದು ಹೇಳಿದ್ದಾರೆ.

ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದನ್ನು ನೋಡಿದ ಹಲವರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ನೆಟಿಜನ್‌ಗಳು ನಮ್ಮ ಭಾರತೀಯ ಕಂಪನಿಗಳು ಕೂಡ ಇಂತಹ ಆವಿಷ್ಕಾರಗಳನ್ನು ಮಾಡಬೇಕು ಎಂದು ಆನಂದ್ ಮಹೀಂದ್ರಾ ಅವರ ಮಾತನ್ನು ಒಪ್ಪಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!