August 31, 2026
Monday, August 31, 2026
spot_img

ಕೆರಿಯರ್ ಜಂಜಾಟ, ಮೈಂಡ್ ಫುಲ್ ಒತ್ತಡ: ಯೂತ್ಸ್‌ಗೆ ಆಧ್ಯಾತ್ಮಿಕತೆ ಮೇಲೇಕೆ ಇಷ್ಟೊಂದು ಕ್ರೇಜ್?

ಈಗಿನ ಕಾಲದ ಯೂತ್ಸ್ ಅಂದ ತಕ್ಷಣ ನಮಗೆ ನೆನಪಾಗೋದು ಕೈಯಲ್ಲೊಂದು ಐಫೋನು, ಕಿವಿಯಲ್ಲೊಂದು ಏರ್‌ಪಾಡ್ಸ್, ನೈಟ್ ಪಾರ್ಟಿಗಳು, ವೀಕೆಂಡ್ ಟ್ರಿಪ್‌ಗಳು. ಆದರೆ, ಈ ಲೈಫ್‌ಸ್ಟೈಲ್ ಮಧ್ಯೆ ಇನ್ನೊಂದು ದೊಡ್ಡ ಚೇಂಜ್ ಸೈಲೆಂಟ್ ಆಗಿ ನಡೀತಿದೆ. ಅದೇನಪ್ಪಾ ಅಂದ್ರೆ, ಇವತ್ತಿನ ಹುಡುಗ-ಹುಡುಗಿಯರು ಆಧ್ಯಾತ್ಮ, ಧ್ಯಾನ, ದೇವಸ್ಥಾನ ಅಂತ ಸಿಕ್ಕಾಪಟ್ಟೆ ಇಂಟರೆಸ್ಟ್ ತೋರಿಸ್ತಿದ್ದಾರೆ. ನೆನ್ನೆ-ಮೊನ್ನೆವರೆಗೂ ಪೂಜೆ-ಪುನಸ್ಕಾರ ಅಂದ್ರೆ ವಯಸ್ಸಾದೋರ ಕೆಲಸ ಅನ್ಕೊಳ್ತಿದ್ದ ದಿನಗಳು ಹೋಗಿ, ಇವತ್ತು ಯುವಕರೇ ಹೆಚ್ಚಾಗಿ ಟೆಂಪಲ್ ರನ್ ಮಾಡ್ತಿರೋದು ನೀವು ನೋಡಿರ್ತೀರಾ.

ಅಷ್ಟಕ್ಕೂ ಯೂತ್ಸ್‌ಗೆ ದಿಢೀರ್ ಅಂತ ದೇವರ ಮೇಲೆ ಯಾಕಿಷ್ಟು ಪ್ರೀತಿ, ನಂಬಿಕೆ ಬಂತು? ಇದರ ಹಿಂದಿರೋ ರಿಯಲ್ ಕಥೆ ಏನು?

ಇಂದಿನ ಜನರೇಷನ್‌ ಲೈಫ್ ಫುಲ್ ಬ್ಯುಸಿ. ಮಾರ್ನಿಂಗ್‌ ಎದ್ದ ತಕ್ಷಣ ಆಫೀಸ್ ಕೆಲಸ, ಡೆಡ್‌ಲೈನ್, ಕೆರಿಯರ್ ಪ್ರೆಷರ್, ಇಎಂಐ ಚಿಂತೆ, ಜೊತೆಗೆ ಪರ್ಸನಲ್ ಲೈಫ್ ಪ್ರಾಬ್ಲಮ್ಸ್. ಈ ಟೆನ್ಷನ್‌ನಲ್ಲಿ ಮೈಂಡ್ ಕಂಪ್ಲೀಟ್ ಎಕ್ಸಾಸ್ಟ್ ಆಗ್ಬಿಡುತ್ತೆ. ಎಷ್ಟೇ ಪಾರ್ಟಿ ಮಾಡಿದ್ರೂ, ಸಿನಿಮಾ ನೋಡಿದ್ರೂ ಸಿಗದ ನೆಮ್ಮದಿ, ಒಂದು ಹತ್ತು ನಿಮಿಷ ಪ್ರಶಾಂತವಾಗಿರೋ ದೇವಸ್ಥಾನದಲ್ಲಿ ಕೂತಾಗ, ಕಣ್ಣು ಮುಚ್ಚಿ ಮೆಡಿಟೇಶನ್ ಮಾಡಿದಾಗ ಸಿಗೋ ಆ ‘ಪೀಸ್ ಆಫ್ ಮೈಂಡ್’ ರಿಲ್ಯಾಕ್ಸ್ ಅನಿಸ್ತಿದೆ.

ಈಗ ಕೆದಾರನಾಥ, ಉಜ್ಜಯಿನಿ, ವಾರಾಣಸಿ, ಇಶಾ ಯೋಗ ಸೆಂಟರ್‌ಗೆ ಹೋಗೋದು ಬರೀ ಪೂಜೆ ಮಾಡೋಕೆ ಅಷ್ಟೇ ಅಲ್ಲ, ಅದೊಂದು ‘ಪಾಸಿಟಿವ್’ ವೈಬ್ ಸಿಗೋ ಜಾಗ ಆಗಿಬಿಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಶಿವನ ಹಾಡು ಹಾಕಿ, ಹಿಮಾಲಯದ ದೇವಸ್ಥಾನಗಳ ವೀಡಿಯೋ ಹಾಕಿದ್ರೆ ಸಿಗೋ ಲೈಕ್ಸ್ ಮತ್ತು ವ್ಯೂಸ್ ಯುವಕರನ್ನ ಇನ್ನಷ್ಟು ಅಟ್ರ್ಯಾಕ್ಟ್ ಮಾಡ್ತಿದೆ. ಅಷ್ಟೇ ಅಲ್ಲ, “ಟ್ರಾವೆಲಿಂಗ್ ವಿತ್ ಸ್ಪಿರಿಚುಯಾಲಿಟಿ” ಅನ್ನೋ ಹೊಸ ಕಾನ್ಸೆಪ್ಟ್ ಯುವಕರಿಗೆ ಸಕತ್ ಇಷ್ಟ ಆಗ್ತಿದೆ.

ಹಿಂದಿನ ಕಾಲದಲ್ಲಿ ದೇವರನ್ನ ಕಂಡ್ರೆ ಭಯ ಇರ್ತಿತ್ತು. ಪೂಜೆ ಮಾಡದಿದ್ರೆ ದೇವರಿಗೆ ಕೋಪ ಬರುತ್ತೆ, ಶಾಪ ಕೊಡ್ತಾನೆ ಅನ್ನೋ ಭಯವಿತ್ತು. ಆದ್ರೆ ಈಗಿನ ಯುವಕರು ದೇವರನ್ನ ಭಯದಿಂದ ನೋಡ್ತಿಲ್ಲ, ಬದಲಿಗೆ ಒಬ್ಬ ಬೆಸ್ಟ್ ಫ್ರೆಂಡ್ ಥರ ನೋಡ್ತಿದ್ದಾರೆ. ತಮ್ಮ ಕಷ್ಟ, ನೋವು, ಖುಷಿ ಎಲ್ಲವನ್ನೂ ದೇವರ ಮುಂದೆ ಶೇರ್ ಮಾಡ್ಕೊಳ್ತಾರೆ. ಅವರಿಗೆ ದೇವರು ಅನ್ನೋದು ಒಬ್ಬ ಗೈಡ್, ಮೆಂಟರ್ ಥರ ಕಾಣಿಸ್ತಿದ್ದಾನೆ.

ಒಂದು ಕಾಲದಲ್ಲಿ ಆಧ್ಯಾತ್ಮ ಅಂದ್ರೆ ಗ್ರಂಥ ಓದಬೇಕಿತ್ತು, ಕಷ್ಟದ ಸಂಸ್ಕೃತ ಶ್ಲೋಕ ಕಲಿಬೇಕಿತ್ತು. ಆದ್ರೆ ಈಗ ಹಂಗಿಲ್ಲ. ಯೂಟ್ಯೂಬ್, ಸ್ಪಾಟಿಫೈ, ಇನ್‌ಸ್ಟಾಗ್ರಾಮ್‌ನಲ್ಲಿ ಭಗವದ್ಗೀತೆಯ ನೀತಿಗಳನ್ನು ಅತ್ಯಂತ ಸಿಂಪಲ್ ಆಗಿ, ಇಂದಿನ ಲೈಫ್‌ಗೆ ಹೇಗೆ ಅಪ್ಲೈ ಮಾಡಬೇಕು ಅಂತ ಹೇಳಿಕೊಡೋ ಸ್ಪೀಕರ್ಸ್‌ ಇದ್ದಾರೆ. ಸಂಸ್ಕೃತ ಕಲಿಯದಿದ್ದರೂ, ಗೀತೆಯಲ್ಲಿರೋ ಪ್ರಾಕ್ಟಿಕಲ್ ವಿಷಯಗಳು ಯುವಕರ ತಲೆಗೆ ಬೇಗ ಹತ್ತುತ್ತೆ.

ಲೈಫ್ ಅಂದ್ಮೇಲೆ ಫೇಲ್ಯೂರ್ಸ್, ಬ್ರೇಕಪ್ಸ್, ಜಾಬ್ ಲಾಸ್ ಇದ್ದೇ ಇರುತ್ತೆ. ಇಂಥಾ ಟೈಮ್‌ನಲ್ಲಿ ಡಿಪ್ರೆಸ್ ಆಗಿ ಕುಸಿಯೋದಕ್ಕಿಂತ, ‘ನನ್ನ ಜೊತೆ ಯಾವುದೋ ಒಂದು ದೈವಿಕ ಶಕ್ತಿ ಇದೆ, ಎಲ್ಲವೂ ಒಳ್ಳೆದಕ್ಕೇ ಆಗುತ್ತೆ’ ಅನ್ನೋ ನಂಬಿಕೆ ಯುವಕರಲ್ಲಿ ಬರ್ತಿದೆ.

ಒಟ್ಟಿನಲ್ಲಿ ಹೇಳಬೇಕೆಂದರೆ, ಇಂದಿನ ಯುವಕರಿಗೆ ಆದ್ಯಾತ್ಮ ಅನ್ನೋದು ಯಾವುದೋ ಹಳೆಯ ಕಾಲದ ಆಚಾರ-ವಿಚಾರ ಅಲ್ಲ. ಅದು ಅವರ ಪರ್ಸನಲ್ ಲೈಫ್‌ಗೆ ಸಿಗೋ ಒಂಥರಾ ‘ಮೆಂಟಲ್ ಹೆಲ್ತ್ ಬೂಸ್ಟರ್’. ಮಾಡರ್ನ್ ಯುಗದ ಕನ್‌ಫ್ಯೂಷನ್‌ಗಳಲ್ಲಿ ರಿಯಲ್ ನೆಮ್ಮದಿ ಮತ್ತು ಪಾಸಿಟಿವಿಟಿ ಹುಡುಕೋಕೆ ಯೂತ್ಸ್ ಕಂಡುಕೊಂಡಿರೋ ಪವರ್‌ಫುಲ್ ದಾರಿಯೇ ಈ ಆಧ್ಯಾತ್ಮ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !