Monday, October 2, 2023

Latest Posts

ನೊಟೀಸ್ ಗೆ ಕ್ಯಾರೇ ಅನ್ನದ ಮಾಲೀಕ: ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು!

ಹೊಸದಿಗಂತ ವರದಿ,ಮುಂಡಗೋಡ:

ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸನವಳ್ಳಿ ಗ್ರಾಮದಲ್ಲಿ ಅನಧಿಕೃತ ಇಟ್ಟಿಗೆ ಭಟ್ಟಿಗಳ ಮಾಲಿಕರಿಗೆ ನೋಟಿಸ್ ನೀಡಿದರು ಕ್ಯಾರೆ ಅನ್ನದ ಆರು ಇಟ್ಟಿಗೆ ಭಟ್ಟಿಗಳ ಮೇಲೆ ತಹಶೀಲ್ದಾರ ಶಂಕರ್ ಗೌಡಿ ಅವರು ದಾಳಿ ನಡೆಸಿ ಜೆಸಿಬಿಯಿಂದ ತೆರವುಗೊಳಿಸುವ ಕಾರ್ಯ ಆರಂಭಿಸಿದರು.

ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಇಟ್ಟಿಗೆ ಭಟ್ಟಿಗಳು ಆರಂಭಗೊಂಡಿದ್ದವು. ಈ ಬಗ್ಗೆ ಇಲ್ಲಿ ಕಾರ್ಯನಿರ್ವಹಿಸಿದ ಹಲವು ತಹಶೀಲ್ದಾರರು ಅನಧಿಕೃತ ಇಟ್ಟಿಗೆ ಭಟ್ಟಿಗಳನ್ನು ತೆರವು ಗೊಳಿಸಲು ಹಾಗೂ ಇಟ್ಟಿಗೆ ತಯಾರಿಕೆಯನ್ನು ಬಂದ ಮಾಡಿಸಲು ಪ್ರಯತ್ನವನ್ನು ಮಾಡಿದ್ದರೂ. ಆದರು ರಾಜಕೀಯ ಒತ್ತಡದಿಂದಾಗಿ ಹಣ ಬಲವಿದ್ದವರು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದರು ಆದರಿಂದ ಅಧಿಕಾರಿಗಳು ಯಾವುದೇ ಗೂಜೀಗೆ ಹೋಗುತ್ತಿರಲಿಲ್ಲ ಆದರೆ ನೂತನವಾಗಿ ಆಗಮಿಸಿದ ತಹಶೀಲ್ದಾರ ಶಂಕರ್ ಗೌಡಿ ಅವರು ಯಾವ ರಾಜಕೀಯ ಒತ್ತಡಕ್ಕೆ ಮಣೆಯದೆ ಮೂಲಾಜಿಲ್ಲದೆ. ತಾಲೂಕಿನಲ್ಲಿ ವ್ಯವಸಾಯ ಮಾಡಬೇಕಾದ ಜಮೀನಿನ ಲ್ಲಿ ಅನಧಿಕೃತ ವಾಗಿ ಇಟ್ಟಿಗೆ ಭಟ್ಟಿಯನ್ನು ತಯಾರಿಸುವವರಿಗೆ ಖಡಿವಾಣ ಹಾಕಲು ಮುಂದಾಗಿದ್ದರು. ಈ ಬಗ್ಗೆ ಇಟ್ಟಿಗೆ ಭಟ್ಟಿಗಳ ಮಾಲಿಕರಿಗೆ ಕಳೆದ ಎರಡೂ ಮೂರು ತಿಂಗಳಿಂದ ನೋಟೀಸ್ ನೀಡಿದ್ದರು. ಯಾವ ಸುಧಾರಣೆ ಕಾಣದೆ ಇದ್ದಾಗ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ನೋಟಿಸಿಗೆ ಉತ್ತರಿಸದೆ ಇದ್ದ ಅನಧಿಕೃತ ಇಟ್ಟಿಗೆ ಭಟ್ಟಿಗಳಿಗೆ ಗುರುವಾರ ಭೇಟಿ ನೀಡಿ ಜೆಸಿಬಿಯಿಂದ ಸೂಮಾರು ಆರು ಭಟ್ಟಿಗನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು.

ತಹಶೀಲ್ದಾರ ಶಂಕರ ಗೌಡಿ ಅನಧಿಕೃತ ಇಟ್ಟಿಗೆ ಭಟ್ಟಿಗಳನ್ನು ತೆರವುಗೊಳಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ. ಸ್ಥಳಕ್ಕೆ ಆಗಮೀಸಿದ ಭಟ್ಟಿಗಳ ಮಾಲೀಕರು ಹಾಗೂ ಸಾರ್ವಜನಿಕರು ಭಟ್ಟಿಗಳನ್ನು ತೆರವುಗೊಳಿಸಲು ಕೆಲವು ದಿನಗಳ ಕಾಲವಕಾಶ ಕೇಳದ್ದಾರೆ. ಮಳೆಗಾಲ ಆರಂಭವಾಗಿದ್ದ ರಿಂದ ಭಟ್ಟಿಗಳನ್ನು ತೆರವುಗೊಳಿಸಲು ಕಷ್ಟ ಸಾಧ್ಯವೆಂದು ತಹಶೀಲ್ದಾರರಿಗೆ ತಿಳಿದರು. ಮತ್ತೊಂದು ಅವಕಾಶ ರೈತರಿಗೆ ನೀಡಿದಂತಾಗಿದೆ. ಮುಂದಾದರೂ ಅನಧಿಕೃತವಾಗಿ ಇಟ್ಟಿಗೆ ಭಟ್ಟಿಗಳ ತಯಾರಿಕೆ ಮಾಡುವುದು ನಿಲ್ಲುವುದೆ ಎಂದು ಕಾದು ನೋಡಬೇಕಾಗಿದೆ. ಈ ಸಂದರ್ಭದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಪೊಲೀಸ ಬಿಗಿ ಬಂದೋಬಸ್ತ ಏರ್ಪಡಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!