ಸಾರ್ವಜನಿಕ ಸ್ಥಳದಲ್ಲಿ ಲೋಡೆಡ್ ಪಿಸ್ತೂಲ್ ಹಿಡಿದು ತಿರುಗಾಟ: ವ್ಯಕ್ತಿಯ ಬಂಧನ

ಹೊಸದಿಂತ ವರದಿ,ಚಿಕ್ಕಮಗಳೂರು:

ಗಾಂಜ ಮತ್ತಿನಲ್ಲಿ ಲೋಡೆಡ್ ಪಿಸ್ತೂಲ್ ಸಹಿತ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಬೀರೂರು ಮೂಲದ ಸಮೀರ್ ಬಂಧಿತ ಆರೋಪಿ. ಆತನಿಂದ ಒಂದು ಲೋಡೆಡ್ ಪಿಸ್ತೂಲ್, ಹತ್ತು ಸಜೀವ ಗುಂಡುಗಳು, ಎರಡು ಚಾಕು, ಒಂದು ಡ್ರಾಗರ್, 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಾಂಜಾ ವ್ಯಸನಿಯಾಗಿದ್ದ ಸಮೀರ್, ಕಳೆದ ರಾತ್ರಿ ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುತ್ತಿದ್ದ ಇದರಿಂದ ಸಾರ್ವಜನಿಕರು ಭೀತಿಗೊಳಗಾಗಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!